SUDDIKSHANA KANNADA NEWS/ DAVANAGERE/ DATE:31-03-2025
ದಾವಣಗೆರೆ: ಬಸವೇಶ್ವರ ಲಾರಿ ಟ್ರಾನ್ಸ್ ಪೋರ್ಟ್ ಮಾಲೀಕರು, ಸಮಾಜಕ ಸೇವಕರಾದ ಮಹಾಂತೇಶ್ ವಿ. ಒಣರೊಟ್ಟಿ ಅವರ ತಾಯಿ ಸಂಗಮ್ಮ ವಿಧಿವಶರಾಗಿದ್ದಾರೆ.
ಕೆ. ಬಿ. ಬಡಾವಣೆಯ ಹಳೇ ಪೊಸ್ಟ್ ಆಫೀಸ್ ಹಿಂಭಾಗದಲ್ಲಿನ ನಾಲ್ಕನೇ ಮೇನ್ ಏಳನೇ ಕ್ರಾಸ್ ನಲ್ಲಿ ವಾಸವಿದ್ದ ಅವರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸಂಗಮ್ಮ ಅವರು ವೀರಪ್ಪ
ಒಣರೊಟ್ಟಿ ಅವರ ಧರ್ಮಪತ್ನಿ.
ಮಹಾಂತೇಶ್ ವಿ. ಒಣರೊಟ್ಟಿ ಅವರ ಮಾತೃಶ್ರೀಯಾಗಿದ್ದು, ಮೃತರ ನಿಧನಕ್ಕೆ ವಿವಿಧ ಸಂಘಟನೆಗಳು, ಹಿತೈಷಿಗಳು, ಕುಟುಂಬದವರು, ಬಂಧುಮಿತ್ರರು ಸಂತಾಪ ಸೂಚಿಸಿದ್ದಾರೆ.
ಲಯನ್ಸ್ ಕ್ಲಬ್ ಉಪಾಧ್ಯಕ್ಷ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಮಹಾಂತೇಶ್ ವಿ. ಒಣರೊಟ್ಟಿ ಅವರ ಮಾತೋಶ್ರೀಯವರಾದ ಸಂಗಮ್ಮನವರು ಇಂದು ಬೆಳಗಿನ 8 ಗಂಟೆಗೆ ವಿಧಿವಶರಾದರು. ಅಂತ್ಯಕ್ರಿಯೆ ಸಂಜೆ 5 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನಡೆಯುವುದೆಂದು ಕುಟುಂಬವರ್ಗದವರು ತಿಳಿಸಿದ್ದಾರೆ.