SUDDIKSHANA KANNADA NEWS/ DAVANAGERE/ DATE:16-04-2025
ದಾವಣಗೆರೆ: ಹತ್ತು ವರ್ಷಗಳ ಹಿಂದೆ ಜಾತಿ ಗಣತಿ ಮಾಡಲಾಗಿದ್ದು, ಅವೈಜ್ಞಾನಿಕವಾಗಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಮರು ಜಾತಿಗಣತಿ ಮಾಡಬೇಕೆಂಬ ಬೇಡಿಕೆಗೆ ನನ್ನ ಸಹಮತ ಇದೆ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 17ರಂದು ಮಂತ್ರಿಮಂಡಲದಲ್ಲಿ ಗಂಭೀರವಾಗಿ ಚರ್ಚೆ ಆಗಲಿದೆ. ಲಿಂಗಾಯತರ ಸಂಖ್ಯೆ ಕಡಿಮೆ ತೋರಿಸಲಾಗಿದೆ. ಬೇರೆ ವರ್ಗದವರ ಸಂಖ್ಯೆ ಹೆಚ್ಚಾಗಿದೆ. ವೈಜ್ಞಾನಿಕವಾಗಿ ಜಾತಿಗಣತಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮತ್ತೆ ಜಾತಿಗಣತಿ ಮಾಡಬೇಕೆಂಬ ಅಭಿಪ್ರಾಯ ಇದೆ. ಜಾತಿ ಗಣತಿ ಜಾರಿಯಾಗಲ್ಲ ಎಂಬ ನಂಬಿಕೆ ಇದೆ. ಸಚಿವರು, ಶಾಸಕರು ಈ ಬಗ್ಗೆ ಗಂಭೀರವಾಗಿ ಚರ್ಚಿಸಲಿದ್ದಾರೆ. ಒಕ್ಕಲಿಗರು, ಲಿಂಗಾಯತರು ಎಂಬುದು ಅಲ್ಲ. ಎಲ್ಲಾ ವರ್ಗದವರೂ ವಿರೋಧ ಮಾಡುತ್ತಿದ್ದಾರೆ. ನಾನು ಸರ್ಕಾರಕ್ಕೆ ಎಚ್ಚರಿಕೆ ನೀಡಲು ಹೋಗುವುದಿಲ್ಲ. ಅವರಿಗೆ ತಿಳುವಳಿಕೆ ಇದೆ ಎಂದು ಶ್ರೀಗಳು ಹೇಳಿದರು.
ಹತ್ತು ವರ್ಷಗಳಿಂದಲೂ ಎಷ್ಟು ನೀರು ಹರಿದು ಹೋಗಿದೆ. ಅಂದು ನಡೆದ ಜಾತಿಗಣತಿ ಸರಿಯಾಗಿಲ್ಲ, ವೈಜ್ಞಾನಿಕವಾಗಿಲ್ಲ ಎಂಬುದು ಎಲ್ಲಾ ವರ್ಗದವರ ಅಭಿಪ್ರಾಯ. ಹೊಸದಾಗಿ ಶಾಸ್ತ್ರೀಯವಾಗಿ ನಡೆಸಬೇಕು. ಲಿಂಗಾಯತರ ಸಂಖ್ಯೆ ತುಂಬಾನೇ ಕಡಿಮೆ ಇದೆ. ಬೇರೆ ವರ್ಗದ್ದು ಜಾಸ್ತಿ ಇದೆ. ಸಮಾಜದ ಒಲವಿನ ಬಗ್ಗೆ ತಿಳಿದುಕೊಳ್ಳುತ್ತಾರೆ. ಎಲ್ಲಾ ಸಚಿವರು, ಶಾಸಕರು ಜಾತಿಗಣತಿ ಪರ ಇಲ್ಲ. ಅನ್ಯಾಯ ಸರಿಪಡಿಸಬೇಕು, ನಾವು ಎಚ್ಚರಿಕೆ ನೀಡಲು ಯಾರು? ತಿಳುವಳಿಕೆ ನೀಡುತ್ತೇವೆ ಎಂದು ಸಾಣೇಹಳ್ಳಿ ಶ್ರೀಗಳು ಹೇಳಿದರು.