SUDDIKSHANA KANNADA NEWS/ DAVANAGERE/ DATE:16-12-2024
ದಾವಣಗೆರೆ: ಸೂಫಿಸಂತರದ ಹಜರತ್ ಸೈಯದ್ ಚಮನ್ ಶಾವಲಿ (ರ. ಅ) ರವರ ಸಂಭ್ರಮದ ಸಂದಲ್ ಮತ್ತು ಉರುಸ್ ಗೆ ಸೂಕ್ತವಾದ ಪೊಲೀಸ್ ಬಂದೋಬಸ್ತ್ ಒದಗಿಸಿ ಸುಸೂತ್ರವಾಗಿ ನೆರವೇರಿಸಿಕೊಡಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಅವರಿಗೆ ದೊಡ್ಡಬಾತಿ ಮುಸ್ಲಿಂ ಒಕ್ಕೂಟ ಮನವಿ ಸಲ್ಲಿಸಿತು.
ಡಿಸೆಂಬರ್ 18 ಮತ್ತು 19ರಂದು ದೊಡ್ಡಬಾತಿ ಗ್ರಾಮದ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆಯ ಕೇಂದ್ರವಾದ ಸೂಫಿ ಸಂತರಾದ ಹಜರತ್ ಸೈಯದ್ ಚಮನ್ ಶಾವಲಿ (ರ. ಅ) ರವರ ಸಂಭ್ರಮದ ಸಂದಲ್ (ಗಂದ) ಮತ್ತು ಉರುಸ್ ಪ್ರತಿ ವರ್ಷದಂತೆ ಈ ವರ್ಷವೂ ನಡೆಯಲಿದೆ. ಈ ವರ್ಷವು ಸಂಭ್ರಮದ ಸಂದಲ್ (ಗಂದ)ವನ್ನು ದಾವಣಗೆರೆ ಜಿಲ್ಲೆಯ ವಿವಿಧ ತಾಲೂಕುಗಳು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಜನರು ಬುಧವಾರ ಸಂಜೆಯಿಂದ ಸಂತರ ದರ್ಗಾ ಕೆ ಆಗಮಿಸಿ ಗಂಧವನ್ನು ಅರ್ಪಿಸಿ ದುವಾ ಮತ್ತು ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಂದಲ್ (ಗಂದ) ಅರ್ಪಿಸಲು ಸಂಭ್ರಮದಿಂದ ಓದಿಕೆ ವನ್ನು ಓದುತ್ತಾ ತೆರಳುತ್ತಾರೆ. ಈ ಸಂಭ್ರಮದ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಾ ಪ್ರಚೋದಿಸುವ ಮತ್ತು ಉತ್ತೇಜಿಸುವ ಉದ್ದೇಶದೊಂದಿಗೆ ಶಾಂತಿ ಕದಡಲು ಪ್ರಯತ್ನಿಸಬಹುದು.
ಈ ಮೊದಲು ಕೂಡ ಹಲವು ಬಾರಿ ಭಕ್ತಾದಿಗಳು ಸಂತರ ದರ್ಗಾ ಕೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಚೋದನಕಾರಿ ಘೋಷಣೆಗಳು ಕೂಗಿರುವ ನಿದರ್ಶನಗಳಿವೆ. ದರ್ಗಾ ಅವರಣದಲ್ಲಿಯೇ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಹಲವರನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಲ್ಲದೆ ಮಹಿಳೆಯರ ಮತ್ತು ಮಕ್ಕಳ ಮೇಲೆ ಹಲ್ಲೆ ಮತ್ತು ಕಲ್ಲಿನಿಂದ ಹೊಡೆದಿರುವ ಉದಾಹರಣೆಗಳಿವೆ. ಈ ಸಂಬಂಧ ಎರಡೂ ಕಡೆ ಪ್ರಕರಣದಾಖಲಾಗಿವೆ. ಆದ್ದರಿಂತ ಶಾಂತಿಯುತ ವಾತಾವರಣ ಕದಡಲು ಪ್ರಯತ್ನಿಸುವ ಮತ್ತು ಪ್ರಚೋದನಕಾರಿ ಘೋಷಣೆ ಕೂಗುವ ವ್ಯಕ್ತಿಗಳ ಮೇಲೆ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಮುತುವರ್ಜಿ ವಹಿಸಿ ಹೆಚ್ಚಿನ ಪೊಲೀಸರನ್ನು ಬಂದೋಬಸ್ ಗಾಗಿ ನಿಯೋಜಿಸಿ ಶಾಂತಿಯುತವಾದ ಸಂದಲ್ (ಗಂದ) ಮತ್ತು ಉರುಸ್ ನಡೆಸಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ದೊಡ್ಡಬಾತಿ ಮುಸ್ಲಿಂ ಒಕ್ಕೂಟದ ಸಂಚಾಲಕ ಹಾಗೂ ಎಸ್ ಡಿ ಪಿ ಐ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಒಕ್ಕೂಟದ ಸದಸ್ಯ ಹಾಗೂ ತಂಜಿಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಸದಸ್ಯ ಸೈಯದ್ ಹಾಕಿ ಆರೀಫ್, ಸಾಜಿದ್ ಅಹ್ಮದ್, ದರ್ಗಾ ಕಮಿಟಿ ಸದಸ್ಯರಾದ ಝಬಿ ಹಜರತ್ ಹಜರತ್, ಸೈಯದ್ ರಿಯಾಜ್, ಸೈಯದ್ ಮುನೀರ್ ಮತ್ತು ಇತರರು ಉಪಸ್ಥಿತರಿದ್ದರು.