SUDDIKSHANA KANNADA NEWS/ DAVANAGERE/ DATE:23-03-2025
ದಾವಣಗೆರೆ: ಜಿಲ್ಲೆಯಲ್ಲಿ ವಿವಿಧ ಇಲಾಖೆಯ ಹಲವು ಕಾಮಗಾರಿಗಳು ಕೈ ಗೆತ್ತಿಕೊಂಡಿರುವ ನಿರ್ಮಿತಿ ಕೇಂದ್ರದವರಿಗೆ ವೇದಿಕೆಯಲ್ಲಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಅವರು ಕ್ಲಾಸ್ ತೆಗೆದುಕೊಂಡರು.
ದಾವಣಗೆರೆ ನಗರದ ಹಳೇ ಪಿಬಿ ರಸ್ತೆಯಲ್ಲಿನ ಖಬರಸ್ಥಾನದಲ್ಲಿ 25 ಲಕ್ಷ ಮೌಲ್ಯದ ವಜುಖಾನ ನಿರ್ಮಾಣದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕಳಪೆ ಕಾಮಗಾರಿ ಮಾಡ್ಬೇಡ್ರಪ್ಪ, ಉತ್ತಮ ಕಾಮಗಾರಿ ಮಾಡ್ರಿ ಎಂದರು. ಖಬರಸ್ಥಾನದ ವಜುಕಾನ ನಿರ್ಮಾಣ ಸೇರಿದಂತೆ ಜಿಲ್ಲೆಯಲ್ಲಿನ ಕಾಮಗಾರಿಗಳಲ್ಲಿ ಗುಣಮಟ್ಟವಿರಲಿ ಎಂದು ಸಚಿವರು ಸೂಚಿಸಿದರು.
ಹಿಂದಿಯಲ್ಲಿ ಸಂಸದರ ಭಾಷಣ:
ವೇದಿಕೆಯಲ್ಲಿ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹಿಂದಿಯಲ್ಲಿ ನೆರದವರಿಗೆಲ್ಲರಿಗೂ ರಂಜಾನ್ ಹಬ್ಬದ ಶುಭವನ್ನು ಕೋರಿ ಬಳಿಕ ಭಾಷಣದೂದ್ದಕ್ಕು ಹಿಂದಿಯಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದರು. ತಮ್ಮ ಪತ್ನಿ ಹಾಗೂ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಹಿಂದಿ ಭಾಷಣವನ್ನು ಕೇಳಿದ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಸಂಸದರು ಹಿಂದಿ ಮಾತಾಡ್ತಾರೆ ಎಂದು ತಿಳಿದಿದ್ದೆ, ಆದರೆ ಇಷ್ಟು ಚೆನ್ನಾಗಿ ಮಾತಾಡ್ತಾರೆ ಎಂದು ತಿಳಿದಿರಲಿಲ್ಲವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.