SUDDIKSHANA KANNADA NEWS/ DAVANAGERE/ DATE:15-08-2024
ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಹಿರಿಯ ಸಾಹಿತಿಗಳು,ಚಿಂತಕರು, ಲೇಖಕರು , ರಂಗಸಂಘಟಕರು ,ನಾಟಕ ರಚನೆಕಾರರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾಗಿದ್ದ ಪ್ರೊ.ಎಸ್.ಬಿ.ರಂಗನಾಥ್ ಅವರು ವಿಧಿವಶರಾಗಿದ್ದಾರೆ.
ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, 2017 ರಲ್ಲಿ ಸಂತೆಬೆನ್ನೂರು ಗ್ರಾಮದಲ್ಲಿ ನಡೆದಂತಹ 8 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಂತಹ ಚನ್ನಗಿರಿ ತಾಲ್ಲೂಕಿನ ಸಿದ್ದನಮಠ ಗ್ರಾಮದ ಪ್ರೊ.ಎಸ್.ಬಿ.ರಂಗನಾಥ್ ರವರು ನಿಧನರಾದ ಹಿನ್ನೆಲೆಯಲ್ಲಿ ಚನ್ನಗಿರಿ ಕಸಾಪ ಅಧ್ಯಕ್ಷ ಎಲ್. ಜಿ. ಮಧುಕುಮಾರ್, ತಾಲ್ಲೂಕು ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಎಸ್.ಬಸವನಗೌಡ , ಪ್ರಭಾಕರ್ ಹೊದಿಗೆರೆ, ಬಿ.ಈ. ಸಿದ್ದಪ್ಪ ,ಎಂ.ಯು.ಚನ್ನಬಸಪ್ಪ, ಬಾ ರಾ ಮಹೇಶಣ್ಣ, ಜಿ.ಚಿನ್ನಸ್ವಾಮಿ,ಗುಳ್ಳೆಹಳ್ಳಿ ಮಲ್ಲಿಕಣ್ಣ, ನಲ್ಲೂರು ಮಂಜಪ್ಪ ಟಿ.ವಿ.ಚಂದ್ರಪ್ಪ, ಮಲಹಾಳ್ ತಿಪ್ಪೇಶ್, ಜಗದೀಶ್ ಗೌಡ್ರು, ಪ್ರೇಮ್‌ಚಂದ್, ಮಾದೇನಹಳ್ಳಿ ಓಂಕಾರಮೂರ್ತಿ , ಸುವರ್ಣಮ್ಮ ಸ್ವಾಮಿ , ಕುಸುಮ ಡಾ.ರಂಗಪ್ಪ, ಹನುಮಂತರಾಯಪ್ಪ,ಅಬು ಸಾಲೀಹ ,ಕಂಚಿಗನಾಳ್ ಮಂಜಣ್ಣ ಮತ್ತಿತರರು ಭೇಟಿ ನೀಡಿ ಸಂತಾಪ ಸೂಚಿಸಿದರು. ಕುಟುಂಬದವರಿಗೆ ಸಾಂತ್ವನ ಹೇಳಿದರು.
ಸಿರಿಗೆರೆ ಶ್ರೀ ಭೇಟಿ:
ಇಂದು ಸಿದ್ದನಮಠದಲ್ಲಿ ಎಸ್.ಬಿ.ರಂಗನಾಥ ಸರ್ ಅವರ ಅಂತಿಮ ದರ್ಶನ ಪಡೆಯಲು ಧಾವಿಸಿದ ಚಿತ್ರದುರ್ಗದ ಸಿರಿಗೆರೆಯ ತರಳಬಾಳು ಬೃಹನ್ಮಠದ ಪೀಠಾಧಿಪತಿ ಶಿವಮೂರ್ತಿ ಸ್ವಾಮೀಜಿ ಅವರು ಸಂತಾಪ ಸೂಚಿಸಿದರು.
ಎಂಥದೆ ಪೂರ್ವಶ್ರಾಮದ ನಂತರದ ಆಧ್ಯಾತ್ಮಿಕ ಸಾಧನೆಯ ಉತ್ತುಂಗದಲ್ಲಿದ್ದರು. ಸಾಧಕರ, ಗುರುಗಳ ಅವಿನಾಭವ ಸಂಬಂಧದಲ್ಲಿ ಭಾವುಕತೆ ಉಮ್ಮಳಿಸುವುದು ಸಹಜ. ಅದು ದೈವದ ಆಶಯ. ಅದರಂತೆ ಅಂತಿಮ ದರ್ಶನದಲ್ಲಿ ಶ್ರೀಗಳು ವಿದಾಯದಲ್ಲಿ ಮೌನವಾಗಿ ಮಹಾನ್ ಚೇತನಕ್ಕೆ ಪ್ರೀತಿಯ ಸ್ಪರ್ಶನೀಡಿದ್ದು ಗ್ರಹಿಸಿದ ಭಕ್ತರಿಗಷ್ಟೆ ನಿಲುಕುವ ಕ್ಷಣ. ತನುವಿನ ಸಂತೈಕೆಯ ಗುರುಗಳು ಡಾ.ಶಿವಮೂರ್ತಿ ಸ್ವಾಮೀಜಿ ಅವರು ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.