ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ವಲ್ಲಭ ಬಾಯಿ ಪಟೇಲ್, ಬಿರ್ಸಾ ಮುಂಡಾ ಜಯಂತಿ ಪ್ರಯುಕ್ತ ಬಿಜೆಪಿಯಿಂದ ರನ್ ಫಾರ್ ಯೂನಿಟಿ

On: October 29, 2024 6:53 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:29-10-2024

ದಾವಣಗೆರೆ: ಜಿಲ್ಲಾ ಬಿಜೆಪಿಯು ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಬಿರ್ಸಾ ಮುಂಡಾ ಜಯಂತಿ ಪ್ರಯುಕ್ತ ರನ್ ಫಾರ್ ಯುನಿಟಿ ಕಾರ್ಯಕ್ರಮವನ್ನು ನಗರದ ಗುಂಡಿ ಮಹಾದೇವಪ್ಪ ಸರ್ಕಲ್‌ನಿಂದ ಜಯದೇವ ವೃತ್ತದವರೆಗೆ ನಡೆಸಿತು.

ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಬಿರ್ಸಾ ಮುಂಡಾ ಜಯಂತಿ ಅಂಗವಾಗಿ ಇಡೀ ದೇಶದಾದ್ಯಂತ ರನ್ ಫಾರ್ ಯುನಿಟಿ ಎಂಬ ಕಾರ್ಯಕ್ರಮದ ಅಂಗವಾಗಿ ಇಂದು ನಮ್ಮ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಮುಖಂಡರುಗಳು, ಕಾರ್ಯಕರ್ತರುಗಳು ಓಟವನ್ನು ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಉದ್ದೇಶವೆಂದರೆ ದೇಶದ ಏಕತೆಗಾಗಿ ಶ್ರಮಿಸಿದಂತಹ ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ಜಯಂತಿ ಮತ್ತು ಈ ದೇಶಕ್ಕೆ ಎಂದೂ ಕೂಡಾ ಏಕತೆ ವಿಚಾರದಲ್ಲಿ ಚ್ಯುತಿ ಬರಬಾರದೆಂಬುದು. ಈ ದೇಶ ಎಂದಿಗೂ ಒಗ್ಗಟ್ಟಾಗಿ, ಏಕತೆಯಿಂದ ಇರಬೇಕು ಎಂದು ಸರ್ದಾರ್ ವಲ್ಲಭಬಾಯಿ ಪಟೇಲ್‌ರವರ ದಿಟ್ಟ ನಿಲುವುಗಳು, ಅವರ ಧೀರ ಕ್ರಮಗಳಿಂದ ಈ ದೇಶ ಇಂದು ಒಗ್ಗಟ್ಟಾಗಿದೆ. ನಮ್ಮ ದೇಶವನ್ನು ಇಡೀ ವಿಶ್ವ ಗೌರವಿಸುತ್ತಿದೆ ಎಂದರೆ ಅದು ಬಲಿಷ್ಟವಾದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವಿಸುತ್ತಾ ಇದೆ. ಇಲ್ಲಿ ಹಲವಾರು ಜಾತಿ, ಮತಗಳು ಇದ್ದರೂ ಕೂಡಾ ಈ ದೇಶ ಅತ್ಯಂತ ಬಲಿಷ್ಠವಾಗಿದೆ. ಏನೇ ಬಂದರೂ ಕೂಡಾ ನಮ್ಮ ಭಾರತ ಏಕತೆ, ಒಗ್ಗಟ್ಟಾಗಿ ಇರುತ್ತದೆ. ಹಾಗಾಗಿ ಅಂತಹ ಮಹಾನ್ ನಾಯಕರ ಸ್ಮರಣೆಗಾಗಿ ಇಂತಹ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರುವ ನಿಟ್ಟಿನಲ್ಲಿ ಇಂದು ಏಕತೆಗಾಗಿ ಓಟ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ
ಎಂದರು.

ಮಾಜಿ ಮಹಾಪೌರರಾದ ಬಿ.ಜಿ.ಅಜಯಕುಮಾರ ಮಾತನಾಡಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಉಕ್ಕಿನ ಮನುಷ್ಯ ಎಂದು ಕರೆಸಿಕೊಂಡವರು. ಅವರ ಸೇವೆಯಿಂದ, ಸಂಘಟನೆಯಿಂದ ಅವರಿಗೆ ಸರ್ದಾರ್ ಎಂಬ ಹೆಸರು ಬಂದಿದೆ. ಬ್ರಿಟೀಷರ ಕೈಯಲ್ಲಿದ್ದಂತಹ 550 ಸಂಸ್ಥಾನಗಳನ್ನು ಇಂದು ಒಂದು ಗೂಡಿಸಿ ಬಲಿಷ್ಠ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅವರು ಯಶಸ್ವಿಯಾದರು. ಅವರಿಗೆ ಮೊಟ್ಟಮೊದಲ ಬಾರಿಗೆ ಪ್ರಧಾನಮಂತ್ರಿಯಾಗುವ ಅವಕಾಶ ಇದ್ದರೂ ಸಹಾ ಅವರು ತ್ಯಾಗಮಾಡಿ ಆ ಪದವಿಯಿಂದ ಹಿಂದೆ ಸರಿದಂತಹ ಮಹಾನ್ ವ್ಯಕ್ತಿಯಾಗಿದ್ದಾರೆ. ಅಂತಹ ವ್ಯಕ್ತಿ ನಮ್ಮ ಭಾರತ ದೇಶದಲ್ಲಿರುವ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಇಂತಹ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆದೇಶದಂತೆ ಇಂದು ಜಯಂತಿ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಈ ಏಕತೆಗಾಗಿ ಓಟ ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಮೇಯರ್ ಎಸ್.ಟಿ.ವೀರೇಶ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ, ಎಚ್.ಎನ್.ಶಿವಕುಮಾರ, ನವೀನ್, ಶಂಕರ್, ಗೋವಿಂದರಾಜ, ಜಗದೀಶ, ಶಿವಪ್ರಕಾಶ, ಟಿಂಕರ್ ಮಂಜಣ್ಣ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment