SUDDIKSHANA KANNADA NEWS/ DAVANAGERE/ DATE:05-04-2025
ದಾವಣಗೆರೆ: ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಒಬ್ಬರ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ಹರಿಹರ ಪಟ್ಟಣದ ವಿದ್ಯಾನಗರದಲ್ಲಿ ನಡೆದಿದೆ.
ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಜಯನಾಯ್ಕ ಅವರ ನಿವಾಸದಲ್ಲಿ 4.8 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಒಡವೆ, 50 ಸಾವಿರ ರೂಪಾಯಿ ಕದ್ದೊಯ್ಯಲಾಗಿದೆ. ಚೈನ್ ಸರ, ಉಂಗುರ, ಬ್ರಾಸ್ ಲೇಟ್, ಕಿವಿಓಲೆ ಸೇರಿದಂತೆ ಒಟ್ಟು 60.5 ಗ್ರಾಂ ಬಂಗಾರದ ಒಡವೆ, 50 ಸಾವಿರ ರೂಪಾಯಿ ನಗದು ಕಳ್ಳತನ ಮಾಡಲಾಗಿದೆ.
ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯನಾಯ್ಕ ಅವರು ಯುಗಾದಿ ಹಬ್ಬದ ಪ್ರಯುಕ್ತ ಕುಟುಂಬದ ಸದಸ್ಯರೊಂದಿಗೆ ಮಾರ್ಚ್ 29ರಂದು ಊರಿಗೆ ತೆರಳಿದ್ದರು. ಜಯನಾಯ್ಕ ಅವರು ಮನೆಗೆ ಬೀಗ ಹಾಕಿ ರಾತ್ರಿ ಪಾಳಿ ಕರ್ತವ್ಯಕ್ಕೆ ತೆರಳಿದ್ದರು. ಬೆಳಿಗ್ಗೆ 9.30ರ ಸುಮಾರಿನಲ್ಲಿ ಮನೆಗೆ ಬಂದಾಗ ಗೇಟ್ ಹಾಗೂ ಬಾಗಿಲಿನ ಇಂಟರ್ ಲಾಕ್ ಒಡೆದು ಕಳ್ಳರು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.