• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Monday, May 19, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

“ಧರ್ಮದ ಹೆಸರಿನಲ್ಲಿ ಗಲಭೆ ಸೃಷ್ಟಿಸುವುದು ಸರಿಯಲ್ಲ”: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

Editor by Editor
May 5, 2025
in ದಾವಣಗೆರೆ, ಬೆಂಗಳೂರು
0
“ಧರ್ಮದ ಹೆಸರಿನಲ್ಲಿ ಗಲಭೆ ಸೃಷ್ಟಿಸುವುದು ಸರಿಯಲ್ಲ”: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

SUDDIKSHANA KANNADA NEWS/ DAVANAGERE/ DATE-05-05-2025

ದಾವಣಗೆರೆ: ಎಲ್ಲಾ ಧರ್ಮಗಳು ಸಮಾನತೆ ಹಾಗೂ ಭ್ರಾತೃತ್ವದ ಬಗ್ಗೆ ಹೇಳಿವೆ ಜೊತೆಗೆ ದಯವೇ ಧರ್ಮದ ಮೂಲ ಎಂದು ಸಾರಿವೆ. ಆದ್ದರಿಂದ ಧರ್ಮದ ಹೆಸರಿನಲ್ಲಿ ಗಲಭೆ ಸೃಷ್ಠಿಸುವುದು ಸರಿಯಲ್ಲ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.

ಅವರು ಜಗಳೂರು ತಾಲ್ಲೂಕಿನ ಕ್ಯಾಸೇನಹಳ್ಳಿ ಗ್ರಾಮದಲ್ಲಿ ನೂತನ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಧರ್ಮದ ಹೆಸರಿನಲ್ಲಿ ದುರಂತ ನಡೆದಿದೆ.‌‌ ಇದು‌ ಖಂಡನೀಯ.ಎಲ್ಲಾ ಧರ್ಮಗಳು‌ ದಯವೇ ಧರ್ಮದ ಮೂಲ ಎಂದು ಹೇಳಿರುವುದನ್ನು‌ ಮರೆಯಬಾರದು ಎಂದರು.

ಗ್ರಾಮೀಣ ಭಾಗದಲ್ಲಿ ಎಲ್ಲರನ್ನು ಒಳಗೊಂಡು ದೇವಸ್ಥಾನದ ಕೆಲಸ ಕಾರ್ಯ ಮಾಡಿರುವುದು ಶ್ಲಾಘನೀಯ ‌ಹಾಗೂ ಮಾದರಿಯಾಗಿದೆ. ಯಾವುದೇ ಬೇಧಭಾವವಿಲ್ಲದೇ ಗ್ರಾಮದಲ್ಲಿರುವ ಎಲ್ಲರೂ ಒಳಗೊಂಡು ದೇವಸ್ಥಾನದ ನಿರ್ಮಾಣ
ಮಾಡಿದ್ದಾರೆ. ಈ ಮೂಲಕ ನಮ್ಮ‌ ಪರಂಪರೆ, ಸಂಸ್ಕೃತಿ ಎತ್ತಿಹಿಡಿಯುವ ಕೆಲಸ ಗ್ರಾಮೀಣ ಭಾಗದ ಜನರು ಮಾಡುತ್ತಿದ್ದಾರೆ. ಯಾವುದೇ ಜಾತಿ, ಮತ, ಲಿಂಗ ಬೇಧಭಾವ ಬೇಡ ನಾವೆಲ್ಲರೂ ಮಾನವರು. ಅದಕ್ಕಾಗಿ‌ ನಮಗೆ ಮಾನವೀಯ ಮೌಲ್ಯಗಳು ಮುಖ್ಯ. ಮೇಲುಕೀಳು ಭಾವನೆ ಬೇಡ ನಾವೆಲ್ಲ ಭಾರತಾಂಬೆಯ ಮಕ್ಕಳು ಎಂಬ ಭಾವನೆ ಬರಬೇಕು ಆಗ ನಮ್ಮ‌ಸಮಾಜ,ದೇಶ ಉದ್ದಾರವಾಗಲು ಸಾಧ್ಯ.ಧರ್ಮವನ್ನು‌ ಒಡೆದು ರಾಜಕಾರಣದಲ್ಲಿ ಯಶಸ್ಸು ಪಡೆಯಬಹುದು ಅಷ್ಟೇ. ಅದರಿಂದ ಬೇರೆ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ನಾವೆಲ್ಲಾ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ್ ಖರ್ಗೆಯವರು ಜನಗಣತಿ ಹಾಗೂ ಜಾತಿಗಣತಿಯೊಂದಿಗೆ ಆರ್ಥಿಕ,ಶೈಕ್ಷಣಿಕ ಸಮೀಕ್ಷೆ ಬಗ್ಗೆಯೂ ಸೇರಿಸಬೇಕೆಂದು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮ‌ ಆಡಳಿತ ನೀಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ‌ ಮೂಲಕ‌ ಜನಪರ ಕೆಲಸ ಮಾಡುತ್ತಿದ್ದಾರೆ. ಸರ್ವರಿಗೂ ಸಮಬಾಳು ಸಮಪಾಲು ಜಾರಿಗೆ ಮಾಡಿದ್ದಾರೆಂದರು.

ಕೇಂದ್ರ ಸರ್ಕಾರ ತೈಲ ಬೆಲೆಯೊಂದಿಗೆ ದಿನಬಳಕೆಯ‌ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಇದರಿಂದ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ. ಕೇಂದ್ರದಲ್ಲಿ‌ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿತ್ತು ಎಂದರು.

ಗ್ರಾಮೀಣಭಾಗದ ಮಹಿಳೆಯರು ಸ್ವಸಹಾಯ ಸಂಘಗಳಲ್ಲಿ ನೊಂದಣಿ ಮಾಡಿಕೊಂಡು‌ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು.ನಮ್ಮ ಎಸ್ ಎಸ್ ಕೇರ್ ಟ್ರಸ್ಟ್ ಮೂಲಕ ಜನರಿಗೆ ಡಯಾಲಿಸಿಸ್, ಹೆರಿಗೆ ಸೇವೆ ಹಾಗೂ ಕಣ್ಣಿನಪೊರೆ ಚಿಕಿತ್ಸೆ ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡ್ ದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ವೇದಿಕೆಯಲ್ಲಿ ಹದಡಿಮಠದ ಶ್ರೀ ಸದ್ಗುರು ಪರಮಹಂಸ ಮುರಳೀಧರ ಸ್ವಾಮೀಜಿ, ಶಾಸಕ ಬಿ.ದೇವೇಂದ್ರಪ್ಪ, ಕೆ. ಪಿ. ಪಾಲಯ್ಯ, ಅಸಗೋಡು ಜಯಸಿಂಹ, ಸೊಕ್ಕೆ ನಾಗರಾಜ್, ಬಿಸ್ತುವಳ್ಳಿ ಬಾಬು, ವೇಣುಗೋಪಾಲ ರೆಡ್ಡಿ, ವೀರಣ್ಣ,ಮಂಜುನಾಥ್,ಷಂಶೀರ್ ಅಹಮ್ಮದ್ ಹಾಗೂ ‌ಕ್ಯಾಸನಹಳ್ಳಿ‌ ಗ್ರಾಮಸ್ಥರು ಉಪಸ್ಥಿತರಿದ್ದರು.

ಐಎಎಸ್,ಕೆಪಿಎಸ್,ಐಪಿಎಸ್ ಉಚಿತ ತರಬೇತಿ:

ದಾವಣಗೆರೆ ಜಿಲ್ಲೆಯ ‌ಆಸಕ್ತ ಯುವಜನರಿಗಾಗಿ ಐಎಎಸ್, ಕೆಎಎಸ್ ಹಾಗೂ ಐಪಿಎಸ್ ಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಯುವಸಮೂಹ ಇದರ ಪ್ರಯೋಜನ‌ ಪಡೆದುಕೊಳ್ಳಬೇಕು. ಮುಂದಿನ‌ ತಿಂಗಳು‌ ಈ ತರಬೇತಿ ಪ್ರಾರಂಭವಾಗಲಿದೆ. ಸುಮಾರು ಏಳು ‌ತಿಂಗಳು ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ತಾಲ್ಲೂಕು ‌ಮಟ್ಟದಲ್ಲಿ‌ ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

Next Post
ರೈತರ ಹೋರಾಟಕ್ಕೆ ಜಯ: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ, ನೋಂದಣಿ ಅವಧಿ ಮೇ 31ರವರೆಗೆ ವಿಸ್ತರಣೆ

ರೈತರ ಹೋರಾಟಕ್ಕೆ ಜಯ: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ, ನೋಂದಣಿ ಅವಧಿ ಮೇ 31ರವರೆಗೆ ವಿಸ್ತರಣೆ

Leave a Reply Cancel reply

Your email address will not be published. Required fields are marked *

Recent Posts

  • ‘ರೋಮ್ ಹೊತ್ತಿ ಉರಿಯುತ್ತಿದ್ದರೆ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ’: ಸಂಕಷ್ಟದ ನಡುವೆ ಕೈ ಸರ್ಕಾರ ಸಾಧನೆ ಸಮಾವೇಶ ಹೊರಟಿದೆ!
  • ನೀರ್ಥಡಿ ಐತಿಹಾಸಿಕ ದೇಗುಲ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಅವ್ಯವಸ್ಥೆಗೆ ಕಾಂಗ್ರೆಸ್ ಶಾಸಕ ಬೇಸರ!
  • ಮೂಗಿಗೆ ತುಪ್ಪ ಸವರದೇ ಜನತೆಗೆ ಕೊಟ್ಟ ಭರವಸೆಯಂತೆ ಆಡಳಿತ ನಡೆಯುತ್ತಿದೆ: ಸಚಿವ ಎಸ್.ಎಸ್ ಮಲ್ಲಿಕಾರ್ಜುನ
  • ತಾಳ್ಮೆ, ಬುದ್ಧಿಶಕ್ತಿ ಬೆಳವಣಿಗೆಗೆ ಸಹಕಾರಿ ಚದುರಂಗ: ಗಡಿಗುಡಾಳ್ ಮಂಜುನಾಥ್
  • ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನ

Recent Comments

No comments to show.

Archives

  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಸಾಹಿತ್ಯ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In