ಕೋಲ್ಕತ್ತಾದ ಕೋಲ್ಕತ್ತಾ ಟ್ರೈನಿ ವೈದ್ಯ ಹತ್ಯೆ ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ಈ ತಿಂಗಳ ಜ. 18 ರಂದು ತೀರ್ಪು ನೀಡಲಿದೆ. CBI ಮತ್ತು ಆರೋಪಿ ಸಂಜಯ್ ರಾಯ್ ಪರ ವಾದ ಈಗಾಗಲೇ ಮುಗಿದಿದೆ. ತಾವು ಪ್ರಸ್ತುತಪಡಿಸಿದ ಸಾಕ್ಷ್ಯವನ್ನು
ಗಣನೆಗೆ ತೆಗೆದುಕೊಂಡು ಸಂಜಯ್ಗೆ ಮರಣದಂಡನೆ
ವಿಧಿಸಬೇಕೆಂದು CBI ಕೋರಿದೆ. ತಮ್ಮ ಕಕ್ಷಿದಾರರನ್ನು ಪ್ರಕರಣದಲ್ಲಿ ಸಿಲುಕಿಸಲು ಸಾಕ್ಷ್ಯಾಧಾರ ಸೃಷ್ಟಿಸಲಾಗಿದೆ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ. ಹೀಗಾಗಿ ಕೋರ್ಟ್ ತೀರ್ಪು ಕುತೂಹಲ ಕೆರಳಿಸಿದೆ.