SUDDIKSHANA KANNADA NEWS/ DAVANAGERE/ DATE:23-10-2024
ದಾವಣಗೆರೆ: ಉದ್ಯೋಗ ವಿನಿಮಯ ಕೇಂದ್ರಕ್ಕೆ ತಮ್ಮಲ್ಲಿರುವ ಹುದ್ದೆಗಳ ವಿವರವನ್ನು ಸಲ್ಲಿಸಬೇಕು. ಜಿಲ್ಲೆಯ ಎಲ್ಲಾ ನಿಯೋಜಕರು, ಕಂಪನಿಗಳು, ಕಾರ್ಖಾನೆಗಳು, ಸಂಘ, ಸಂಸ್ಥೆಗಳು, ಹೋಟೆಲ್‍ಗಳು, ಲಾಡ್ಜ್ ಗಳು, ಆಟೋಮೊಬೈಲ್, ಶೋ ರೂಂಗಳು ಸೇರಿದಂತೆ ಎಲ್ಲಾ ರೀತಿಯ ದೊಡ್ಡ ದೊಡ್ಡ ಅಂಗಡಿಗಳು, ಉದ್ದಿಮೆಗಳು ಕಡ್ಡಾಯವಾಗಿ ಸ್ಥಳೀಯ ಉದ್ಯೋಗ ವಿನಿಮಯ ಕೇಂದ್ರಕ್ಕೆ ತಮ್ಮ ಉದ್ಯೋಗಿಗಳ ಮಾಹಿತಿಯನ್ನು ನಿಗಧಿತ ನಮೂನೆ ಇ.ಆರ್.-1ರಲ್ಲಿ ಕಡ್ಡಾಯವಾಗಿ ಪ್ರತಿ ತ್ರೈಮಾಸಿಕಾಂತ್ಯಕ್ಕೆ ಸಲ್ಲಿಸಬೇಕು.
ತಮ್ಮ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಹಾಗೂ ಖಾಲಿ ಹುದ್ದೆಗಳ ಭರ್ತಿಗೆ ಮುನ್ನ ಆ ಹುದ್ದೆಗಳನ್ನು ಸ್ಥಳೀಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಅಧಿಸೂಚಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿಗಳು ಅಥವಾ ಕಚೇರಿಯ ದೂ.ಸಂ :08192-259446 ಗೆ ಸಂಪರ್ಕಿಸಲು ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ.