SUDDIKSHANA KANNADA NEWS/ DAVANAGERE/ DATE:08-01-2025
ಬೆಂಗಳೂರು: ನಾವವಳಂಥವಳಲ್ಲ.. ನಾವಳವಂಥವಳಲ್ಲ.. ಇದು ಬುಲ್ ಬುಲ್ ಖ್ಯಾತಿಯ ರಚಿತಾ ರಾಮ್ ಕೊಟ್ಟಿರುವ ಖಡಕ್ ತಿರುಗೇಟು.
ಸ್ಯಾಂಡಲ್ ವುಡ್ ನಲ್ಲಿ ರಚಿತಾ ರಾಮ್ ಈಗ ಹಾಟ್ ಫೇವರಿಟ್. ಅಭಿಮಾನಿಗಳ ಪ್ರೀತಿಯ ಬುಲ್ ಬುಲ್. ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ದಶಕಗಳಿಂದಲೂ ಅದೇ ಜನಪ್ರಿಯತೆ ಉಳಿಸಿಕೊಂಡಿರುವ ಗುಳಿಗೆನ್ನೆಯ ಚೆಲುವೆ.
ಆದ್ರೆ, ಇತ್ತೀಚೆಗಷ್ಟೇ ಬಿಗ್ ಬಾಸ್ ಖ್ಯಾತಿಯ ವಕೀಲ ಜಗದೀಶ್ ಅವರು ರಚಿತಾ ರಾಮ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನಟಿ ರಚಿತಾ ರಾಮ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಲ್ಲದೇ, ಹೇಳಿಕೆ ವಿಡಿಯೋ ಬಿಡುಗಡೆ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದುವರೆಗೆ ಯಾವುದೇ ಪ್ರತಿಕ್ರಿಯೆಯನ್ನು ರಚಿತಾ ರಾಮ್ ನೀಡಿರಲಿಲ್ಲ. ಆದ್ರೆ, ಈಗ ಇದಕ್ಕೆ ಪ್ರತಿಕ್ರಿಯೆಯನ್ನು ತನ್ನದೇ ಆದ ಶೈಲಿಯಲ್ಲಿ ಲಾಯರ್ ಜಗದೀಶ್ ಗೆ ಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕಳೆದ 12 ವರ್ಷದಿಂದ ಇದ್ದೇನೆ.ಸಂಭಾವನೆ ಪಡೆಯುತ್ತೇನೆ. ಸಿನಿಮಾಗಳಲ್ಲಿ ನಟಿಸುವುದಕ್ಕೆ ಕೊಡುತ್ತಿದ್ದಾರೆ. ಅವಶ್ಯಕತೆ ಇದ್ದರಷ್ಟೇ ಮಾತನಾಡುವೆ. ಯಾವಾಗಲೂ ಶೂಟಿಂಗ್ ನಲ್ಲಿ ಬ್ಯುಸಿ ಇರುತ್ತೇನೆ. ಫ್ರೀ ಆದಾಗ ಫ್ಯಾಮಿಲಿ ಜೊತೆ ಹೋಗುತ್ತೇನೆ, ಕಾಲ ಕಳೆಯುತ್ತೇನೆ. ನೀವು ಹೇಳಿದ ಆ ವ್ಯಕ್ತಿ ವಯಸ್ಸಲ್ಲಿ ದೊಡ್ಡವರಿದ್ದಾರೆ. ಜೀವನದಲ್ಲಿ ತುಂಬಾ ಅನುಭವ ಇರುವ ವ್ಯಕ್ತಿ. ನನ್ನ ಬಗ್ಗೆ ಏನೇ ಮಾತಾಡಿರಲಿ, ಆ ವ್ಯಕ್ತಿ ಬಗ್ಗೆ ನಾನು ಅಗೌರವ ತೋರುವಂತೆ ಮಾತಾಡಲ್ಲ. ಅಂತೆ-ಕಂತೆಗಳ ಬಗ್ಗೆ ಏನನ್ನೂ ಹೇಳಲ್ಲ ಎಂದು ರಚಿತಾ ರಾಮ್ ಹೇಳಿದ್ದಾರೆ.
ನನ್ನ ಲೈಫ್ ನನ್ನ ಇಷ್ಟ. ಅಂಥದ್ದೇ ಕೆಲಸ ಮಾಡಿದ್ದೇ ಹೌದಾದರೆ ನಾನು ಹಾಗೆ ಮಾಡಿದ್ದೇನೆ ಎಂದು ಯಾರೂ ನಂಬುವುದಿಲ್ಲ. ಇಂಥ ಕೆಲಸ ಮಾಡಲು ಹೋಗುವುದಿಲ್ಲ. ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುತ್ತೇನೆ. ನಾನು ಸರಿ ಇದ್ದಾಗ ಆ ದೇವರೇ ಬಂದು ತಪ್ಪು ಅಂದ್ರು ನಾನು ಒಪ್ಪೋದಿಲ್ಲ ಎಂದು ರಚಿತಾರಾಮ್ ಕಿಡಿಕಾರಿದರು.
ಎಂಥದ್ದೇ ಕಷ್ಟ ಬಂದರೂ ತಪ್ಪು ಕೆಲಸ ಮಾಡಲು ಹೋಗಲ್ಲ. ನಾನು ದೇವಸ್ಥಾನದಲ್ಲಿ ಕೆಲಸ ಮಾಡಿ ಪ್ರಸಾದ ಸೇವಿಸಿ ಜೀವಿಸುತ್ತೇನೆ ಹೊರೆತು ದುಡ್ಡಿಗೋಸ್ಕರ ಕೆಟ್ಟ ಕೆಲಸ ಮಾಡಲ್ಲ. ಅಪ್ಪ ಅಮ್ಮ ಕಲಿಸಿರುವ ಸಂಸ್ಕೃತಿ ನನ್ನದು. ಯಾರು ಏನು ಬೇಕಾದರೂ ಹೇಳಲಿ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬುಲ್ ಬುಲ್ ನಟಿ ಹೇಳಿದರು.