SUDDIKSHANA KANNADA NEWS/ DAVANAGERE/ DATE:20-03-2025
ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಪಾಕ್ ಪರ ಜೈಕಾರ ಹಾಕಿ, ಕನ್ನಡಿಗರಿಗೆ ಅವಹೇಳನ ಮಾಡಿದ ದೇಶದ್ರೋಹಿ ಹಾಗೂ ನಾಡದ್ರೋಹಿ ಹೈಮದ್ ಹುಸೇನ್ ಮತ್ತು ಸಾದಿಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಗೃಹ ಸಚಿವ ಡಾ. ಪರಮೇಶ್ವರ್ ಅವರೆ, ಈ ಇಬ್ಬರೂ ದೇಶ ಹಾಗೂ ನಾಡದ್ರೋಹಿಗಳಿಗೆ ಅಮಾಯಕ ಹಾಗೂ ಆಕಸ್ಮಿಕ ಪಟ್ಟ ಕಟ್ಟದೆ, ಸರಿಯಾದ ಶಿಕ್ಷೆ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ರಾಜ್ಯ ಘಟಕ ಒತ್ತಾಯಿಸಿದೆ.
ಇತ್ತೀಚಿನ ದಿನಗಳಲ್ಲಿ ಪಾಕ್ ಪರ ಘೋಷಣೆ, ಬರಹ ಹೆಚ್ಚಾಗುತ್ತಿದೆ. ಆದರೂ ಕಾಂಗ್ರೆಸ್ ಸರ್ಕಾರ ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ ದೇಶದ್ರೋಹಿಗಳ ಪುಂಡಾಟಿಕೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದೆ.