SUDDIKSHANA KANNADA NEWS/ DAVANAGERE/ DATE:01-02-2025
ದಾವಣಗೆರೆ: ಸ್ವಾಭಿಮಾನಿ ಬಳಗದ ವತಿಯಿಂದ ನಡೆಸಲಾದ ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ? ವಿಶೇಷ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಣೆ ಮಾಡುವ ವಿಚಾರ ಸಂಕ್ರಾಂತಿ ಕಾರ್ಯಕ್ರಮವನ್ನು ಫೆ. 16ರಂದು ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು, ಬೆಳಿಗ್ಗೆ 10ಗಂಟೆಗೆ ಜಯದೇವ ವೃತ್ತದಲ್ಲಿನ ಶ್ರೀ ಶಿವಯೋಗ ಮಂದಿರ ಸಭಾ ಭವನದಲ್ಲಿ ಆಯೋಜಿಸಲಾಗಿದ್ದು, ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತದವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.
ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಮಹಾಸ್ವಾಮೀಜಿ, ಹೊನ್ನಾಳಿ ಶ್ರೀ ಚನ್ನಪ್ಪಸ್ವಾಮಿ ಹಿರೇಕಲ್ಮಠದ ಡಾ. ಒಡೆಯರ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿರುವರು. ಸಾಮಾಜಿಕ ಕಳಕಳಿಯುಳ್ಳ, ಪ್ರಜ್ಞಾವಂತ ಹೋರಾಟಗಾರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತಿದ್ದು, ಮೊದಲ ಬಹುಮಾನ 20 ಸಾವಿರ ರೂ. ಮೂವರಿಗೆ, ದ್ವಿತೀಯ ಬಹುಮಾನ ಮೂವರಿಗೆ 15 ಸಾವಿರ ರೂ., ಮೂವರಿಗೆ 15 ಸಾವಿರ ರೂ. ಬಹುಮಾನ ಪ್ರದಾನ ಮಾಡಲಾಗುವುದು. 282 ಪ್ರಬಂಧಗಳು ಬಂದಿದ್ದು, ಬಹುತೇಕ ಪ್ರಬಂಧಗಳು ಕುಟುಂಬ ರಾಜಕಾರಣದ ವಿರುದ್ಧವೇ ಬಂದಿವೆ. ಈ ವಿಚಾರ ಕುರಿತಂತೆ ಪ್ರಬಂಧ ಬರೆದು ಪ್ರಶಸ್ತಿ ಗೆದ್ದವರು ಮಾತನಾಡಲಿದ್ದಾರೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಬಳಗದ ಶಿವಕುಮಾರ್ ಶೆಟ್ಟರ್, ವಿರೂಪಾಕ್ಷಪ್ಪ ಪಂಡಿತ್, ಎಸ್. ಎಂ. ಸಿದ್ದಲಿಂಗಪ್ಪ, ಮೊಹಮದ್ ಸಾಧಿಕ್, ಎಸ್. ಚಂದ್ರಶೇಖರ್ ಹಾಜರಿದ್ದರು.