SUDDIKSHANA KANNADA NEWS/ DAVANAGERE/ DATE:27-02-2025
ದಾವಣಗೆರೆ: ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿ ನಡೆಯಲಿರುವ ಹಂಪಿ ಉತ್ಸವಕ್ಕೆ ದಾವಣಗೆರೆಯ ಹಿಂದೂಸ್ತಾನಿ ಗಾಯಕಿ ಪೃಥ್ವಿ ಎ. ಟಿ. ಐಗೂರು ಆಯ್ಕೆಯಾಗಿದ್ದಾರೆ.
ಫೆಬ್ರವರಿ 28, ಮಾರ್ಚ್ 1 ಮತ್ತು ಮಾರ್ಚ್ 2ರಂದು ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿರುವ ಹಂಪಿ ಉತ್ಸವಕ್ಕೆ ಲಕ್ಷಾಂತರ ಜನರು ಬರುತ್ತಾರೆ. ಇಂಥ ವೇದಿಕೆಯಲ್ಲಿ ಗಾಯನದ ಅವಕಾಶ ಈ ಪ್ರತಿಭೆಗೆ ಲಭಿಸಿದೆ.
2025 ನೇ ಸಾಲಿನ ಹಂಪಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಗರದ ಹಿಂದೂಸ್ತಾನಿ ಗಾಯಕಿ ಕುಮಾರಿ ಡಾ. ಪೃಥ್ವಿ ಎ.ಟಿ .ಐಗೂರು ಇವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮಾರ್ಚ್ 2ರ ಭಾನುವಾರ ಸಂಜೆ 7:55 ಕ್ಕೆ “ಎದುರು ಬಸವಣ್ಣ ವೇದಿಕೆ” ಯಲ್ಲಿ ನಡೆಯಲಿದೆ. ಡಾ. ಪೃಥ್ವಿ ಎ.ಟಿ.ಐಗೂರು ಇವರು ನಗರದ ಶ್ರೀಮತಿ ಗೀತಾ ತಿಪ್ಪೇಸ್ವಾಮಿ ಐಗೂರು ಇವರ ಪುತ್ರಿ.
ಎ.ಎನ್. ತಿಪ್ಪೇಸ್ವಾಮಿ ಐಗೂರು ಇವರು ಬಾಪೂಜಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೃಥ್ವಿ ಅವರ ಗಾಯನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ದಾವಣಗೆರೆಯ ಪ್ರತಿಭೆ ಹಂಪಿ ಉತ್ಸವದಲ್ಲಿ ಹಾಡಲು ಸಜ್ಜಾಗಿದ್ದಾರೆ.