SUDDIKSHANA KANNADA NEWS/ DAVANAGERE/ DATE:03-02-2025
ದಾವಣಗೆರೆ: ದೇಶ ಸೇವೆ ಮಾಡಿ ನಿವೃತ್ತಿಯಾಗಿ ಬಲ್ಲೂರಿಗೆ ಆಗಮಿಸುತ್ತಿರುವ ಯೋಧ ಬಸವರಾಜ್ ಅವರಿಗೆ ಅದ್ಧೂರಿ ಸ್ವಾಗತ ನೀಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಫೆಬ್ರವರಿ 4ರಂದು ದಾವಣಗೆರೆಗೆ ಆಗಮಿಸುತ್ತಿದ್ದಾರೆ.
ದೇಶದ ಗಡಿ ಭಾಗಗಳಾದ ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ತಾನ, ಮೇಘಾಲಯ, ಅಸ್ಸಾಂ ಸೇರಿದಂತೆ ದೇಶದ ವಿವಿಧ ಗಡಿ ಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸೇವಾವಧಿಯಲ್ಲಿ ವಿಶಿಷ್ಟ ಕಾರ್ಯದ ಮೂಲಕ ಎಲ್ಲರ ಮನಗೆದ್ದಿದ್ದಾರೆ.
ದೇಶದ ಹಲವು ಗಡಿ ಭಾಗಗಳಲ್ಲಿ ತಾಯ್ನಾಡಿನ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತನ್ನ ಹುಟ್ಟೂರಾದ ಬಲ್ಲೂರಿಗೆ ಆಗಮಿಸುತ್ತಿರುವ ಬಸವರಾಜ್ ರವರಿಗೆ ದಾವಣಗೆರೆ ಜಿಲ್ಲಾ ಪ್ಯಾರಾ ಮಿಲಿಟರಿ ಸಂಘ ಹಾಗೂ ದೇಶಭಕ್ತ ಜನತೆಯಿಂದ ಅದ್ದೂರಿ ಸ್ವಾಗತವನ್ನು ಕೋರಲಾಗುತ್ತಿದೆ.
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಬೆಳಿಗ್ಗೆ 10.30ಕ್ಕೆ ಜನಶತಾಬ್ದಿ ರೈಲಿನ ಮೂಲಕ ಆಗಮಿಸುತ್ತಿದ್ದು ಅವರನ್ನು ಸಂಘ ಹಾಗೂ ದೇಶಭಕ್ತ ಬಂಧುಗಳಿಂದ ಸ್ವಾಗತ ಕೋರಲಾಗುತ್ತಿದೆ.