SUDDIKSHANA KANNADA NEWS/DAVANAGERE/DATE:11_11_2025
ದಾವಣಗೆರೆ: ನವದೆಹಲಿಯ ಕೆಂಪು ಕೋಟೆಯಲ್ಲಿ ಪ್ರಬಲ ಕಾರು ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯಾದ್ಯಂತ ತೀವ್ರ ಕಟ್ಟುನಿಟ್ಟಿನ ಎಚ್ಚರ ವಹಿಸಲಾಗಿದೆ.
READ ALSO THIS STORY: ಕೆಂಪು ಕೋಟೆ ಸ್ಫೋಟದ ಹಿಂದಿನ ಪಿತೂರಿಗಾರರ ಬಿಡಲ್ಲ: ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ!
ದೆಹಲಿಯಲ್ಲಿ ನಡೆದ ಸ್ಫೋಟದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಸೂಚನೆ ಮೇರೆಗೆ ದಾವಣಗೆರೆ ನಗರದ ಪ್ರಮುಖ ಜನಸಂದಣಿ ಸ್ಥಳಗಳಾದ ರೇಲ್ವೆ ಸ್ಟೇಷನ್, ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಗಾಜಿನ ಮನೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಶ್ವಾನದಳ ತಂಡ ತಪಾಸಣೆ ನಡೆಸಿ ಪರಿಶೀಲಿಸಿತು.
ಹರಿಹರದ ಶ್ರೀ ಹರಿಹರೇಶ್ವರ ದೇವಾಸ್ಥಾನ, ರೈಲ್ವೆ ನಿಲ್ದಾಣ, ಕೆಎಸ್ಆರ್ ಟಿಸಿ ಬಸ್ ನಿಲ್ದಾಣ, ಗುತ್ತೂರು ಪವರ್ ಹೌಸ್, ಹೊನ್ನಾಳಿಯಲ್ಲಿನ ತುಂಗಾಭದ್ರಾ ನದಿ ಸೇತುವೆ, ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಕೋರ್ಟ್, ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರ, ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಕೋರ್ಟ್, ಸಂತೆಬೆನ್ನೂರು ಪುಷ್ಕರಣಿ ಸೇರಿದಂತೆ ಇತರೆಡೆಗಳಲ್ಲಿನ ಜನಸಂದಣಿ ಹಾಗೂ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಗಾಗಿ ಪ್ರತ್ಯೇಕ ತಂಡಗಳಾಗಿ ಭೇಟಿ ನೀಡಿ ಪರಿಶೀಲಿಸಲಾಯಿತು.


