SUDDIKSHANA KANNADA NEWS/ DAVANAGERE/ DATE:02-04-2025
ದಾವಣಗೆರೆ: 66/11 ಕೆವಿ ಶ್ಯಾಗಲೆ ವಿ.ವಿ. ಕೇಂದ್ರದಿಂದ ಹೊರಡುವ ಎಫ್.4 ಶ್ಯಾಗಲೆ ಮಾರ್ಗದ ಹಾಗೂ ಎಫ್.8 ಲೋಕಿಕೆರೆ ಮಾರ್ಗದಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ಇರುವುದರಿಂದ ಏ.3 ರಂದು ದಾವಣಗೆರೆಯ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲೋಕಿಕೆರೆ, ಯಲ್ಲಮ್ಮನಗರ, ಕೋಡಿಹಳ್ಳಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.