SUDDIKSHANA KANNADA NEWS/ DAVANAGERE/ DATE-11-06-2025
ದಾವಣಗೆರೆ: ದಾವಣಗೆರೆ ವಿಭಾಗದ ಎಲ್ಲಾ ಪ್ರಧಾನ ಅಂಚೆ ಕಚೇರಿಗಳಲ್ಲಿ ಜೂನ್ 17 ರಿಂದ ಹೊಸ ತಂತ್ರಾಂಶ ಅಳವಡಿಕೆ ಮಾಡಬೇಕಾಗಿರುವುದರಿಂದ ಜೂನ್ 14 ಮತ್ತು 16 ರಂದು ಇದರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಉಪಶಾಖಾ ಅಂಚೆ ಕಚೇರಿಗಳಲ್ಲಿ ಯಾವುದೇ ರೀತಿಯ ವ್ಯವಹಾರ, ವಹಿವಾಟು ಇರುವುದಿಲ್ಲ.
ದಾವಣಗೆರೆ, ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕಿನ ಎಲ್ಲ ಅಂಚೆ ಕಚೇರಿಗಳಲ್ಲಿ ಎರಡು ದಿನಗಳ ಕಾಲ ಯಾವುದೇ ವಹಿವಾಟು ಇರುವುದಿಲ್ಲ. ಎಲ್ಲಾ ಎಂಪಿಕೆಬಿವೈ ಏಜೆಂಟರು ಹಾಗೂ ಆವರ್ತಿತ ಠೇವಣೆ ಗ್ರಾಹಕರು, ಕ್ಯಾಲೆಂಡರ್ ತಿಂಗಳ 1 ರಿಂದ 15 ನೇ ತಾರೀಖಿನ ನಡುವೆ ತೆರೆಯಲಾದ ಖಾತೆಗಳಿಗೆ ದಂಡ ಪಾವತಿ ಇಲ್ಲದೇ ಜೂನ್ 12ರ ಒಳಗಾಗಿ ತಮ್ಮ ಆರ್‍ಡಿ ಮಾಸಿಕ ಕಂತುಗಳನ್ನು ಜಮಾವಂತೆ ದಾವಣಗೆರೆ ವಿಭಾಗದ ಅಂಚೆ ಅಧೀಕ್ಷರು ತಿಳಿಸಿದ್ದಾರೆ.