SUDDIKSHANA KANNADA NEWS/ DAVANAGERE/ DATE:06-03-2025
ದಾವಣಗೆರೆ/ ಬೆಂಗಳೂರು : ಗಣಿಗಾರಿಕೆಯ ವಿಚಾರದಲ್ಲಿ ರಾಜಕೀಯ ನುಸುಳಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಬೆಂಗಳೂರಿನ ವಿಧಾನಸಭಾ ಕಲಾಪದ ಸದನದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಶಾಸಕ ಐವಾನ್ ಡಿಸೋಜಾ ಅವರು ರಾಜ್ಯದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆಯೇ? ಈ ಬಗ್ಗೆ
ಮಾಹಿತಿ ಇದೇಯೆ? ಎಂಬ ಪ್ರಶ್ನೆಯ ಬದಲಿಗೆ ಲಾರಿಗಳನ್ನು ತಡೆದು ದಂಡವನ್ನು ಹಾಕಾಲಾಗುತ್ತಿದೆ ಎಂದು ಮಾಡಿರುವ ಆರೋಪಕ್ಕೆ ಸಚಿವರು ತಿರುಗೇಟು ನೀಡಿದರು.
ಕಳೆದ ಎರಡು ವರ್ಷಗಳಿಂದ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆಯೇ? ಈ ಬಗ್ಗೆ ಮಾಹಿತಿ ಇದೆಯೇ? ಇದೇ ಪ್ರಶ್ನೆಯನ್ನು ಪುನಃ ಪುನಃ ಕೇಳಲಾಗಿದ್ದು, ನಾವು ಸಹ ಅದೇ ಉತ್ತರವನ್ನು ಕೊಡುತ್ತಲೇ ಬಂದಿದ್ದೇವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಕೆಲಸ ನೀಡಲಾಗಿದೆ. ಇಲಾಖೆಯಲ್ಲಿನ ದಕ್ಷ ಅಧಿಕಾರಿಗಳು ಕಾರ್ಯಚರಣೆ ಮಾಡುತ್ತಿದ್ದು ರಾಜಧನ ಸೋರಿಕೆಯನ್ನು ತಡೆಗಟ್ಟುತ್ತಿದ್ದಾರೆ. ಪ್ರಮಾಣಿಕವಾಗಿ ಅವರಿಗೆ ಕೆಲಸ
ಮಾಡಲು ಬಿಡಬೇಕು ಎಂದು ಶಾಸಕ ಐವಾನ್ ಡಿಸೋಜಾ ಅವರಿಗೆ ಸಚಿವರು ಸಲಹೆ ನೀಡಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯಚಟುವಟಿಕೆಯ ಮೇಲೆ ರಾಜಕೀಯ ಹಸ್ತಕ್ಷೇಪ ಮಾಡಿದರೆ ಈ ರೀತಿಯ ಸಮಸ್ಯೆಗಳು ತಲೆದೋರಲಿವೆ ಎಂದು ಆರೋಪ ಮಾಡಿದವರ ಮೇಲೆ ಅಸಮಧಾನ ಹೊರಹಾಕಿದ ಸಚಿವರು, ರಾಜಕೀಯ ಮಾಡುವುದನ್ನು ಬಿಟ್ಟರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತವೆ. ಉಡುಪಿ ಮತ್ತು ಮಂಗಳೂರು ಭಾಗದಲ್ಲಿ ನೋಡಿ ನಮ್ಮ ಇಲಾಖೆಯಿಂದ ಎಷ್ಟು ಉತ್ತಮ ಕಾರ್ಯಗಳು ನಡೆಯುತ್ತಿವೆ. ಓನ್ ಟೈಂ ಸೆಟ್ಲಮೆಂಟ್ ಜಾರಿಯಾದರೆ ಇನ್ನಷ್ಟು ಸಮಸ್ಯೆಗಳಿಗೆ ಪರಿಹಾರ ಲಭಿಸುವುದು ಎಂದು ಸಚಿವರು ಶಾಸಕ ಐವಾನ್ ಡಿಸೋಜಾ ಅವರ ಆರೋಪದ ಪ್ರಶ್ನೆಗೆ ತಕ್ಕ ಉತ್ತರವನ್ನು ನೀಡಿದರು.