ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದೇವರ ಹುಂಡಿಗೆ ಖದೀಮರ ಕನ್ನ: ತಡೆಗೆ ಸಂತೇಬೆನ್ನೂರು ಪೊಲೀಸರು ಕೊಟ್ಟ ಐಡಿಯಾ ಏನು…?

On: August 26, 2024 7:05 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:26-08-2024

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳ ಹುಂಡಿ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ, ಗ್ರಾಮದಲ್ಲಿನ ದೇವಸ್ಥಾನದ ಹುಂಡಿಗಳ ಹಣವನ್ನು ಪ್ರತಿ ತಿಂಗಳು ಎಣಿಕೆ ಮಾಡಿಕೊಂಡು ಸಮಿತಿಯವರು ವಶಕ್ಕೆ ಪಡೆದು ಬ್ಯಾಂಕ್ ನಲ್ಲಿ ಇರಿಸುವಂತೆ ಸಂತೇಬೆನ್ನೂರು ಪೊಲೀಸರು ಸೂಚನೆ ನೀಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪೊಲೀಸರು ಗ್ರಾಮಸ್ಥರು, ದೇವಸ್ಥಾನದ ಸಮಿತಿಯವರು ಈ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ.

ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳಲ್ಲಿನ ದೇವಸ್ಥಾನದ ಸಮಿತಿಯ ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರು ಈ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ದೇವಸ್ಥಾನದ ಹುಂಡಿಗಳು ಕಳ್ಳರ ಕೈ ಗೆ
ಸಿಗದಂತೆ ಎಚ್ಚರವಹಿಸಿ. ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ಇರುವಂತೆ ನೋಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.

ಸಂತೆಬೆನ್ನೂರು ಪೊಲೀಸ್ ಠಾಣಾ ವತಿಯಿಂದ ಮಾಹಿತಿಯನ್ನು ಸುತ್ತಮುತ್ತಲಿನ ಗ್ರಾಮಗಳಿಗೆ ರವಾನಿಸಲು ಕೋರಲಾಗಿದೆ. ದೊಡ್ಡಬ್ಬಿಗೆರೆ ಕುಕ್ಕವಾಡೇಶ್ವರಿ ದೇವಸ್ಥಾನದ ಬೀಗ ಹೊಡೆದು ಹುಂಡಿ ಹಣವನ್ನು ಕಳ್ಳರು ಕದ್ದೊಯ್ದಿದಿದ್ದಾರೆ. ಹಾಗಾಗಿ,
ಹುಂಡಿಗಳಲ್ಲಿ ಹೆಚ್ಚು ದಿನ ಹಣ ಇರಿಸಬೇಡಿ ಎಂದು ತಿಳಿಸಲಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment