SUDDIKSHANA KANNADA NEWS/ DAVANAGERE/ DATE:22-08-2024
ಬೆಂಗಳೂರು/ ಬಳ್ಳಾರಿ: ಪ್ರಸ್ತುತ ಹಂತದಲ್ಲಿ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ ಮತ್ತು ತೊಗರಿ ಬೆಳೆಗಳಿಗೆ ಕೀಟ ಮತ್ತು ರೋಗ ಬಾಧೆಗಳು ಕಂಡುಬರುವ ಸಾಧ್ಯತೆ ಇದ್ದು, ಸೂಕ್ತ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಂಟಿ ಕೃಷಿ ನಿರ್ದೇಶರು ತಿಳಿಸಿದ್ದಾರೆ.
ಮೆಕ್ಕೆಜೋಳ ಬೆಳೆಯು ಸುಮಾರು 50-60 ದಿನದ ಬೆಳೆಯಾಗಿದ್ದು, ಫಾಲ್ ಸೈನಿಕ ಹುಳು ಕಂಡುಬರುವ ಸಾಧ್ಯತೆ ಇದೆ. ಇದು ಪ್ರಾರಂಭಿಕ ಹಂತದಲ್ಲಿ ಎಲೆಯ ಮೇಲೆ ಬಿಳಿ ಮಚ್ಚೆಗಳು ಕಂಡುಬರುತ್ತವೆ. ನಂತರ ಉದ್ದವಾದ ರಂಧ್ರಗಳು, ಹಿಕ್ಕೆಯಿಂದ ಕೂಡಿದ ಹರಿದ ಎಲೆಗಳು ಕಾಣುತ್ತವೆ.
ಹತೋಟಿ ಕ್ರಮಗಳು:
ದೊಡ್ಡ ಹಂತದ ಮರಿಹುಳುಗಳು ಕಂಡುಬಂದರೆ ಕೈಯಿಂದ ಆರಿಸಿ ನಾಶಪಡಿಸಬಹುದು. ಜೈವಿಕ ಶೀಲೀಂದ್ರ ಕೀಟನಾಶಕಗಳಾದ ನೊಮೊರಿಯಾ ರಿಲೈ ಅಥವಾ ಮೆಟಾರೈಜಿಯಮ್ ಅನಿಸೋಪ್ಲಿಯೆ ಯನ್ನು 2 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬಹುದು.
ಹೊಲದಲ್ಲಿ ದೀಪಾಕರ್ಷಕ ಬಲೆಗಳನ್ನು ಅಲ್ಲಲ್ಲಿ ಅಳವಡಿಸಿ ಪತಂಗಗಳನ್ನು ಆಕರ್ಷಿಸಿ ನಾಶಪಡಿಸಬಹುದು. ರಸಾಯನಿಕ ಕೀಟನಾಶಕಗಳಾದ ಇಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ @ 0.4 ಗ್ರಾಂ ನಷ್ಟು ಪ್ರತಿ ಲೀ. ನೀರಿಗೆ ಅಥವಾ ಕ್ಲೋರಾಂಟ್ರನಿಲಿಪ್ರೋಲ್ 18.5 ಎಸ್.ಸಿ @ 0.4 ಮಿ.ಲೀ ನಷ್ಟು ಪ್ರತಿ ಲೀ. ನೀರಿಗೆ ಅಥವಾ ಥಯೋಡಿಕಾರ್ಬ್ 75 ಡಬ್ಲೂö್ಯಪಿ @ 1 ಗ್ರಾಂ ನಷ್ಟು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು.
ತೊಗರಿ ಬೆಳೆ:
ತೊಗರಿ ಬೆಳೆಯು ಸುಮಾರು 50-60 ದಿನಗಳೊಳಗಾಗಿ ಬರುವ ಬೆಳೆಯಾಗಿದ್ದು, ಬಿತ್ತನೆಯಾದ 45-60 ದಿನಗಳ ಬೆಳೆಯ ಕುಡಿಯನ್ನು ಚಿವುಟುವುದರಿಂದ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ.
ಈ ಬೆಳೆಗೆ ಸೊರಗು ರೋಗ ಕಂಡುಬರುತ್ತದೆ. ಬಿತ್ತನೆಯಾದ 45-60 ದಿನಗಳಲ್ಲಿ ಸಸಿಗಳು ಬಾಡುತ್ತವೆ. ಹೂ ಬಿಡುವ ಹಂತದಲ್ಲಿ ಗಿಡಗಳು ಗುಂಪು ಗುಂಪಾಗಿ ಒಣಗುತ್ತವೆ ಇದು ಹಾನಿಯ ಲಕ್ಷಣವಾಗಿದೆ.
ಹತೋಟಿ ಕ್ರಮಗಳು:
ನೀರನ್ನು ಬಸಿಗಾಲುವೆ ಮುಖಾಂತರ ಹೊರ ಹಾಕಬೇಕು. ಬಾಧಿತ ಸಸಿಗಳನ್ನು ಕಿತ್ತುಹಾಕಿ ಸುಡುವುದು. ಕಾರ್ಬಂಡೆಜಿA ಶೇ 12 ಮತ್ತು ಮ್ಯಾಂಕೋಜೆಬ್ ಶೇ. 63 ರೋಗನಾಶಕವನ್ನು 3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಬಾಧಿತ ಗಿಡದ ಬುಡಕ್ಕೆ ನೀಡಬೇಕು.
ಈ ರೀತಿಯಾಗಿ ಮೆಕ್ಕೆಜೋಳ ಮತ್ತು ತೊಗರಿ ಬೆಳೆಗಳಿಗೆ ಕೀಟ ಮತ್ತು ರೋಗ ಬಾಧೆಗಳು ಕಂಡುಬAದಲ್ಲಿ ಸೂಕ್ತ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಪ್ರಕಣೆಯಲ್ಲಿ ತಿಳಿಸಿದ್ದಾರೆ.