ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಜಾನುವಾರುಗಳ ತರುವಾಗ ಅನ್ಯ ಧರ್ಮದವರು ನೈತಿಕ ಪೊಲೀಸ್ ಗಿರಿ ಮಾಡಬಾರದು: ಜೆ. ಅಮಾನುಲ್ಲಾ ಖಾನ್!

On: June 3, 2025 9:11 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-03-06-2025

ದಾವಣಗೆರೆ: ಬಕ್ರೀದ್ ಹಬ್ಬದ ವೇಳೆ ಜಾನುವಾರುಗಳನ್ನು ತರುವಾಗ ಅನ್ಯ ಧರ್ಮದವರು ನೈತಿಕ ಪೊಲೀಸ್ ಗಿರಿ ಮಾಡಬಾರದು. ಯಾರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಜೆಡಿಎಸ್ ಮುಖಂಡ ಹಾಗೂ ಮುಸ್ಲಿಂ
ಸಮುದಾಯದ ನಾಯಕ ಜೆ. ಅಮಾನುಲ್ಲಾ ಖಾನ್ ಮನವಿ ಮಾಡಿದರು.

ಎಸ್ಪಿ ಕಚೇರಿಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ನಡೆದ ನಾಗರಿಕ ಸೌಹಾರ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತ್ಯಾಗ-ಬಲಿದಾನದ ಸಂಖೆತವಾದ ಹಬ್ಬ ಇದು. ಹಬ್ಬಗಳನ್ನು ಆಚರಿಸುವ ಸಂದರ್ಭದಲ್ಲಿ ನಾಗರೀಕರು ಸಂತೋಷವಾಗಿರಬೇಕು. ಮುಸ್ಲಿಂ ಸಮಾಜದ ಪದ್ದತಿಯಂತೆ ಈ ಬ್ರಕೀದ್ ಹಬ್ಬವನ್ನು ಆಚರಿಸಲಿದ್ದೇವೆ. ಜೂನ್ 7ರಂದು ಬಕ್ರೀದ್ ಹಬ್ಬದಲ್ಲಿ ನಾವು ಆಚರಿಸುವ ಹಬ್ಬದಿಂದ ಅನ್ಯ ಧರ್ಮೀಯರ ಭಾವನೆಗಳಿಗೆ ತೊಂದರೆಯಾಗದಂತೆ ಮತ್ತು
ಅಸಹ್ಯ ರೀತಿಯಲ್ಲಿ ಆಗಬಾರದು. ಹಬ್ಬದಲ್ಲಿ ಶಾಂತಿ ಸೌಹಾರ್ದತೆಯಿಂದ ಪಾಲನೆ ಮಾಡಿ ಆಚರಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಮಾತನಾಡಿದ ವಿವಿಧ ಧರ್ಮಗಳ ಮುಖಂಡರು, ಹಬ್ಬದ ಸಂಬಂಧ ಸ್ವಚ್ಚತೆ ಹಾಗೂ ಇತರೆ ವಿಷಯಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.

ಜಿಲ್ಲೆಯ ವಿವಿಧ ಕಡೆ ಬಕ್ರೀದ್ ಹಬ್ಬದ ದಿನದಂದು ಪ್ರಾರ್ಥನೆ ಮಾಡಲಿದ್ದು ಅಗತ್ಯ ಕ್ರಮಗಳನ್ನು ಸಂಬಂಧ ಪಟ್ಟ ಇಲಾಖೆಯವರು ಕೈಗೊಳ್ಳಬೇಕೆಂದು ತಿಳಿಸಿದರು. ವಿವಿಧ ಕೋಮಿನ ಮುಖಂಡರು ನಾವು ಸಹೋದರರಿದ್ದಂತೆ. ದಾವಣಗೆರೆ ಜಿಲ್ಲೆಯಲ್ಲಿ ಕೋಮು ಸಾಮರಸ್ಯದಿಂದ ಎಲ್ಲಾ ಹಬ್ಬಗಳನ್ನು ಆಚರಿಸುವುದಾಗಿ ತಿಳಿಸಿದರು.

ದಾವಣಗೆರೆ ನಗರದಲ್ಲಿ ಪಿಬಿ ರಸ್ತೆಯ ಈದ್ಗಾ ಮೈದಾದಲ್ಲಿ, ರಾಮನಗರ, ರಜಾವುಲ್ಲಾ ಮುಸ್ತಫಾ ನಗರದಲ್ಲಿ ಮತ್ತು ದಾವಣಗೆರೆ ನಗರಕ್ಕೆ ಒತ್ತಿಕೊಂಡಂತೆ ಅವರಗೆರೆ ಮತ್ತು ದೇವರಹಟ್ಟಿಯಲ್ಲಿ ಬೆಳಗ್ಗೆ 9 ಗಂಟೆಯಿಂದ 11 ಗಂಟೆವರೆಗೆ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡುವಂತೆ ಕೋರಿದರು.

ಸರ್ದಾರ್ ಅಹ್ಮದ್ ಮಾತನಾಡಿ ಚನ್ನಗಿರಿ ಪೊಲೀಸ್ ಠಾಣೆ ವತಿಯಿಂದ ಶಾಂತಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ನಮ್ಮ ಪಟ್ಟಣದ ಎಲ್ಲಾ ಮಸೀದಿಗಳಿಂದ ಮುಖಂಡರು, ಧರ್ಮಗುರುಗಳು ಮತ್ತು ಹಿಂದೂ ಸಮಾಜದ ಮುಖಂಡರು ಹೋಗಿದ್ದು, ಎಲ್ಲರೂ ಸಹಮತದಿಂದ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುತ್ತೇವೆಂದು ವಾಗ್ದಾನ ಕೊಟ್ಟದ್ದೇವೆ. ಅದರಂತೆ ಆಚರಣೆ ಮಾಡುತ್ತೇವೆ. ಚನ್ನಗಿರಿ ಪಟ್ಟಣದ ಪುರಸಭೆಯವರಿಗೆ ಸ್ವಚ್ಚತೆ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಬೇಕೆಂದು ಕೇಳಿಕೊಂಡರು.

ವಿಶ್ವ ಹಿಂದೂ ಪರಿಷತ್ ಸಂಚಾಲಕ ಮಂಜುನಾಥ್ ಮಾತನಾಡಿ, ವೈವಿಧ್ಯಮಯ ದೇಶ ನಮ್ಮದು, ಹಬ್ಬ-ಹರಿದಿನಗಳಿಂದಲೇ ಸಾವಿರಾರೂ ವರ್ಷಗಳ ದಾಸ್ಯವನ್ನು ಹೋಗಲಾಡಿಸಿದ್ದೇವೆ ಮತ್ತು ದೇಶವನ್ನು ಕಟ್ಟಿದ್ದೇವೆ, ಬಕ್ರೀದ್ ಹಬ್ಬವನ್ನು ಶಾಂತಿರೀತಿಯಿಂದ ಆಚರಿಸಿ, ಸಮಾಜದಲ್ಲಿ ಉಪದ್ರ ಮಾಡುವಂತಹ ದಂಡಿಸುವಂತಹ ಕೆಲಸವನ್ನು ಇಲಾಖೆ ಮಾಡುತ್ತೆ. ಆಗ ಮಾತ್ರ ಈ ದೇಶ, ಸಮಾಜ, ಈ ಜಿಲ್ಲೆ ಸುಖ-ಶಾಂತಿ ನೆಮ್ಮದಿಯಿಂದ ಇರುತ್ತೆ ಎಂಬ ನಂಬಿಕೆ ನಮಗೆ ಇದೆ ಎಂದು ತಿಳಿಸಿದರು

ಹಿಂದೂ ಜಾಗರಣಾ ವೇದಿಕೆ ದಕ್ಷಿಣ ಪ್ರಾಂತೀಯ ಸಂಚಾಲಕ ಸತೀಶ್ ಪೂಜಾರಿ ಮಾತನಾಡಿ, ಬಕ್ರೀದ್ ಹಬ್ಬವು ತ್ಯಾಗ-ಸೌಹಾರ್ದತೆಯ ಸಂಕೇತವಾಗಿ ಮುಸ್ಲಿಂ ಜನಾಂಗದವರು ಆಚರಿಸಲಿದ್ದಾರೆ. ಮುಂದಿನ ಯುವಪೀಳಿಗೆಗೆ ನಮ್ಮ ಸಮಾಜದಲ್ಲಿ ಸಂಸ್ಕಾರ ಹೇಗಿತ್ತು ಅದನ್ನು ಹೇಗೆ ಉಳಿಸಿಕೊಂಡು ಬಂದಿದ್ದೇವೆಂದು ತೋರಿಸುವುದಕ್ಕಾಗಿ ಹಿಂದೂಗಳ ಭಾವನೆಗಳಿಗೆ ಧಕ್ಕೆಬಾರದಂತೆ ಹಬ್ವನ್ನು ಆಚರಿಸುವ ಮೂಲಕ ಪ್ರವಾದಿಯವರ ಮಾತು ಮತ್ತು ಗೌರವವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ತಂಜಿಮುಲ್ ಮುಸ್ಲೀಂಮೀನ್ ಫಂಡ್ ಅಸೋಸಿಯೇಷನ್ ಕಮಿಟಿ ಸದಸ್ಯ ಜಬೀವುಲ್ಲಾ ಮಾತನಾಡಿ ಯಾವುದೇ ಸಮಾಜದಲ್ಲಿ ಶಾಂತಿ ಕಾಪಾಡಬೇಕಾದರೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದರೆ ಮಾತ್ರ ಸಾಧ್ಯವಾಗುತ್ತದೆ. ನಾವೆಲ್ಲಾ ಶಾಂತಿಯಿಂದ ಇದ್ದು, ಶಾಂತಿಯುತವಾಗಿ ಹಬ್ಬ ಆಚರಣೆ ಮಾಡುತ್ತೇವೆಂದು ತಿಳಿಸಿದರು.

ಸಭೆಯಲ್ಲಿ ಎಸ್ಪಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ ಜಿ., ಚನ್ನಗಿರಿ ಉಪವಿಭಾಗದ ಎಎಸ್ಪಿ ಸ್ಯಾಮ್ ವರ್ಗೀಸ್, ಡಿವೈಎಸ್ಪಿ ಬಿ. ಎಸ್.ಬಸವರಾಜ್, ಶರಣ ಬಸವೇಶ್ವರ ಬಿ, ಪಿ. ಬಿ. ಪ್ರಕಾಶ್, ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು , ವಿವಿಧ ಕೋಮಿನ ಮುಖಂಡರು ಉಪಸ್ಥಿತರಿದ್ದರು.

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ದಾವಣಗೆರೆ

ಇಂದಿನಿಂದ ಶುರುವಾಯ್ತು ದಾವಣಗೆರೆಯಿಂದ ಶ್ರೀಶೈಲಂಗೆ ನಾನ್ ಎಸಿ “ಪಲ್ಲಕ್ಕಿ” ನೂತನ ಬಸ್: ಮಾರ್ಗ ವಿವರದ ಡೀಟೈಲ್ಸ್

ಅಂತರಾಷ್ಟ್ರ

ನ. 26ರಿಂದ ಐದು ದಿನಗಳ ಶಾಮನೂರು ಡೈಮಂಡ್, ಶಿವಗಂಗಾ ಕಪ್ 2025: ಅಂತರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜನೆ

ಅಪಘಾತದಲ್ಲಿ ಮೃತಪಟ್ಟ ಶಿಕ್ಷಕನ ಕುಟುಂಬಕ್ಕೆ ಸಿಕ್ತು 1 ಕೋಟಿ ಪರಿಹಾರ! ಸಿಕ್ಕಿದ್ದು ಹೇಗೆ ಗೊತ್ತಾ?

ರೂಪದರ್ಶಿ

ಶವವಾಗಿ ಪತ್ತೆಯಾದ ರೂಪದರ್ಶಿ “ಖುಷಿ” ದೇಹದ ಮೇಲೆ ಗಾಯಗಳು: ಬಂಧಿತ ಗೆಳೆಯ ಖಾಸಿನ್ ಅಹ್ಮದ್ ಸುತ್ತ ಅನುಮಾನದ ಹುತ್ತ!

ಪ್ರಭಾ ಮಲ್ಲಿಕಾರ್ಜುನ್

ಅಡಿಕೆ ಕ್ಯಾನ್ಸರ್ ಕಾರಕವಲ್ಲ, ಹೆಚ್ಚಿನ ಸಂಶೋಧನೆಗೆ ಅನುದಾನ ಕೊಡುವಂತೆ ಕೇಂದ್ರ ಕೃಷಿ ಸಚಿವರಿಗೆ ಮನವಿ: ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ

ಕೆಂಪು ಕೋಟೆ ಪ್ರಬಲ ಸ್ಫೋಟ ಹಿನ್ನೆಲೆ: ದಾವಣಗೆರೆ ಜಿಲ್ಲೆಯಲ್ಲಿ ಹೇಗಿದೆ ಕಟ್ಟೆಚ್ಚರ?

Leave a Comment