ಭೈರತಿ ರಣಗಲ್ ಚಿತ್ರದ ಸಕ್ಸಸ್ ಖುಷಿಯಲ್ಲಿರುವ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ರವರು ಈಗ ಇನ್ನೊಂದು ಸಿನಿಮಾವನ್ನ ಒಪ್ಪೊಕೊಂಡಿದ್ದಾರೆ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಆಗಿರುವ ಶಿವಣ್ಣ ಶೂಟಿಂಗ್ ನಿಂದ ಕೊಂಚ ವಿರಾಮ ತೆಗೆದುಕೊಂಡಿದ್ದಾರೆ
ಯಶಸ್ವಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಪವನ್ ಒಡೆಯರ್ ಅವರು ನಿರ್ದೇಶಕನಾಗಿ ಅಲ್ಲದೇ ನಿರ್ಮಾಪಕರಾಗಿಯು ಗುರುತಿಸಿಕೊಂಡಿದ್ದಾರೆ, ಅವರ ಚೊಚ್ಚಲ ನಿರ್ಮಾಣದ ಡೊಳ್ಳು ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ದೊರಕಿದ್ದು, ಇದೀಗ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟು ಅವಸ್ತಿ vs ಅವಸ್ತಿ ಎಂಬ ಸಿನಿಮಾ ಮಾಡಿ ಸೈ ಅನಿಸಿಕೊಂಡಿದ್ದಾರೆ, ಈಗ ವ್ಯೆಂಕ್ಯಾ ಸಿನಿಮಾದ ನಿರ್ಮಾಣದಲ್ಲಿ ತೊಡಗಿಕೊಂಡಿರುವಾಗಲೇ ತಮ್ಮ ನಾಲ್ಕನೇ ಸಿನಿಮಾ ಶಿವಣ್ಣನೊಂದಿಗೆ ಮಾಡಲು ನಿರ್ಧರಿಸಿದ್ದಾರೆ
ಶಿವಣ್ಣನವರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಪವನ್ ಒಡೆಯರ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ, ಪ್ರತಿಯೊಬ್ಬ ನಿರ್ದೇಶಕನಿಗೂ ಶಿವಣ್ಣನೊಂದಿಗೆ ಒಂದು ಸಿನಿಮಾ ಮಾಡಬೇಕೆಂಬ ಕನಸು ಒತ್ತಿರುತ್ತಾರೆ, ಆ ನಿರ್ದೇಶಕನಲ್ಲಿ ನಾನು ಒಬ್ಬ ಸಹ, ಇದೀಗ ಶಿವಣ್ಣನಿಗೆ ಸಿನಿಮಾ ಮಾಡುವ ನನ್ನ ಕನಸು ಈಗ ನನಸಾಗಿದೆ, ಇದೊಂದು ಪಕ್ಕ ಮಾಸ್ ಥ್ರಿಲ್ಲರ್ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ, ಇದರಲ್ಲಿ ಶಿವಣ್ಣ ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತಲೂ ವಿಭಿನ್ನವಾಗಿ ಕಾಣಲಿದ್ದಾರೆ ಎಂದು ತಿಳಿಸಿದರು.
ಒಡೆಯರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಪೇಕ್ಷಾ ಒಡೆಯರ್ ಮತ್ತು ಪವನ್ ಒಡೆಯರ್ ನಿರ್ಮಿಸುತ್ತಿದ್ದು 2025ರಲ್ಲಿ ಸಿನಿಮಾದ ಚಿತ್ರೀಕರಣ ಆರಂಭಗೊಳ್ಳುವ ಸಾಧ್ಯತೆ ಇದೆ.