ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ ಜಿಲ್ಲೆಯಲ್ಲಿ ಪೌತಿ ಖಾತೆ ಆಂದೋಲನ

On: July 5, 2025 3:43 PM
Follow Us:
ದಾವಣಗೆರೆ
---Advertisement---

SUDDIKSHANA KANNADA NEWS/ DAVANAGERE/ DATE_05-07_2025

ದಾವಣಗೆರೆ: ಜಿಲ್ಲೆಯಲ್ಲಿ ಆಧಾರ್ ಸೀಡಿಂಗ್ ಮಾಡುವ ವೇಳೆ ಪೌತಿ ಖಾತೆಯ 96 ಸಾವಿರ ಪಹಣಿಗಳು ಉಳಿದಿರುವುದು ಕಂಡು ಬಂದಿದೆ. ಕಂದಾಯ ಸಚಿವರ ಸೂಚನೆಯಂತೆ ಪೌತಿಖಾತೆ ಆಂದೋಲನ ಮಾಡುವ ಮೂಲಕ ವಾರಸುದಾರರಿಗೆ ಖಾತೆ ಮಾಡಿಕೊಡಲಾಗುತ್ತದೆ. ಜನರು ಈ ಆಂದೋಲನದ ಪ್ರಯೋಜನ ಪಡೆಯಬಹುದು.

READ ALSO THIS STORY: ಭದ್ರಾ ಡ್ಯಾಂ (Bhadra Dam)ಗೆ 21,180 ಕ್ಯೂಸೆಕ್ ಒಳಹರಿವು: ಡ್ಯಾಂ ಭರ್ತಿಗೆ 17.5 ಅಡಿ ಬರಬೇಕಷ್ಟೇ!

ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣ; ಕಂದಾಯ ಇಲಾಖೆಯು ಸಂಪೂರ್ಣ ಡಿಜಿಟಲೀಕರಣದತ್ತ ಸಾಗುತ್ತಿದ್ದು ಈಗಾಗಲೇ ಎಲ್ಲಾ ಕಡತಗಳನ್ನು ಇ-ಕಚೇರಿಯ ಮೂಲಕವೇ ನಿರ್ವಹಣೆ ಮಾಡಲಾಗುತ್ತಿದೆ.
ಇದಕ್ಕಾಗಿ ಗ್ರಾಮ ಆಡಳಿತಾಧಿಕಾರಿಗಳಿಗೂ ಲ್ಯಾಪ್‍ಟ್ಯಾಪ್ ಸೇರಿ ಆಡಳಿತ ಕಚೇರಿಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಲಬ್ಯವಾಗುವ ಸ್ಥಳ ಮತ್ತು ಸಮಯದ ಆದೇಶ ಹೊರಡಿಸಲಾಗುತ್ತದೆ, ಸಾರ್ವಜನಿಕರು ಗ್ರಾಮ ಆಡಳಿತಾಧಿಕಾರಿಗೆ ಹುಡುಕಾಟ ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಂಗನವಾಡಿ ನೇಮಕ ಅತ್ಯಂತ ಪಾರದರ್ಶಕ; ಅಂಗನವಾಡಿಯಲ್ಲಿ ಖಾಲಿ ಇದ್ದು 50 ಕಾರ್ಯಕರ್ತೆಯರ ಮತ್ತು 282 ಸಹಾಯಕಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾದರ್ಶಕವಾಗಿ ಯಾರು ಸಹ ಮಧ್ಯವರ್ತಿಗಳಿಗೆ ಹಣವನ್ನು ನೀಡಿ ಮೋಸ ಹೋಗಬಾರದು. ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದ್ದು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಕೆಲವು ಲೋಪದೋಷಗಳನ್ನು ಮಾಡಿರುವುದು ಕಂಡು ಬಂದಿದೆ. ಲೋಪದೋಷ ಸರಿಪಡಿಸಲು ಅವಕಾಶಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು ಅನುಮತಿ ಸಿಕ್ಕ ನಂತರ ಲೋಪದೋಷ ಸರಿಪಡಿಸಲು ಆಯಾ ತಾಲ್ಲೂಕು ಕಚೇರಿ, ಜಿ.ಪಂ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈಗಾಗಲೇ ಅರ್ಜಿ ಹಾಕಿದವರಿಗೆ ಮಾತ್ರ ಅವರ ಅರ್ಜಿಯಲ್ಲಿ ಲೋಪದೋಷ ಸರಿಪಡಿಸಲು, ದಾಖಲೆಗಳನ್ನು ಅಪ್‍ಲೋಡ್ ಮಾಡಲು ಅವಕಾಶ ನೀಡಿ ಸಹಾಯಮೇಜವನ್ನು ಸ್ಥಾಪಿಸಲಾಗುತ್ತದೆ ಎಂದರು.

ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ನಿಷೇಧ;

ಪರಿಸರ ಸಂರಕ್ಷಣೆ ಮಾಡಲು ದಾವಣಗೆರೆ ನಗರದಲ್ಲಿ ಗಿಡಗಳನ್ನು ಬೆಳೆಸಲಾಗುತ್ತದೆ. ಇದಕ್ಕಾಗಿ ಮಳೆಗಾಲ ಮುಗಿಯುವವರೆಗೆ ಪ್ರತಿ 15 ದಿನಗಳಿಗೊಮ್ಮೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡು ಸಸಿಗಳನ್ನು ಸಂರಕ್ಷಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ಬಳಕೆಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಸಿಇಓ ಕಚೇರಿ ಸೇರಿದಂತೆ ಅನೇಕ ಕಡೆ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಅದೇ ರೀತಿ ಕಲ್ಯಾಣ ಮಂಟಪ, ಬಾರ್ ಅಂಡ್ ರೆಸ್ಟೋರೆಂಟ್, ವೈದ್ಯರ ಸಂಘ, ಬಟ್ಟೆ ಅಂಗಡಿ ಮಾಲಿಕರುಗಳ ಜೊತೆಗೆ ಸಭೆ ನಡೆಸಿ ಪ್ಲಾಸ್ಟಿಕ್ ಬಳಕೆಯನ್ನು ಗಣನೀಯವಾಗಿ ತಗ್ಗಿಸಲು ಮತ್ತು ವೈಜ್ಞಾನಿಕವಾಗಿ ವಿಲೇ ಮಾಡಲು ಚರ್ಚೆ ಮಾಡಲಾಗುತ್ತದೆ ಎಂದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ, ತಹಶೀಲ್ದಾರ್ ಡಾ; ಎಂ.ಬಿ.ಅಶ್ವಥ ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment