ಮಳೆಗಾಲದಲ್ಲಿ ಅನೇಕ ಜನರು ಜ್ವರದಿಂದ ಬಳಲುತ್ತಿದ್ದಾರೆ. ಪಪ್ಪಾಯಿ ಹಣ್ಣಿನ ಎಳೆಗಳ ಜ್ಯೂಸ್ ಕುಡಿದರೆ ಜ್ವರದ ಭೀತಿಯಿಂದ ಪಾರಾಗಬಹುದು ಎನ್ನುತ್ತಾರೆ ಆಯುರ್ವೇದ ವೈದ್ಯಕೀಯ ತಜ್ಞರು.
ಪಪ್ಪಾಯಿ ಎಲೆಗಳಲ್ಲಿ ವಿಟಮಿನ್ ಎ,ಇ, ಸಿ, ಕೆ ಮತ್ತು ಬಿ ಸಮೃದ್ಧವಾಗಿದೆ. ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜ್ವರದಿಂದ ರಕ್ಷಣೆ ಮಾಡುತ್ತದೆ. ಇದಲ್ಲದೆ, ಈ ಜ್ಯೂಸ್ ಕುಡಿಯುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಪಪ್ಪಾಯಿ ಎಲೆಗಳ ರಸವನ್ನು ತಲೆಗೆ ಹಚ್ಚುವುದರಿಂದ ತಲೆಹೊಟ್ಟು ಮತ್ತು ಕೂದಲು ಉದುರುವುದನ್ನು ಕಡಿಮೆ ಆಗುತ್ತದೆ.