ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

GOOD NEWS: 2 ವರ್ಷದ ಡಿಪ್ಲೊಮಾ (ಕೃಷಿ) ಕೋರ್ಸ್‌ಗೆ ಭರ್ತಿಯಾಗದೇ ಖಾಲಿ ಉಳಿದಿರುವ ಸೀಟುಗಳಿಗೆ ಅ.25ಕ್ಕೆ ಮುಕ್ತ ಕೌನ್ಸಿಲಿಂಗ್

On: October 19, 2024 4:26 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:19-10-2024

ದಾವಣಗೆರೆ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಅಧೀನದಲ್ಲಿರುವ ಕೃಷಿ ಡಿಪ್ಲೊಮಾ ಕಾಲೇಜು ಬ್ರಹ್ಮಾವರದಲ್ಲಿ 2024-25ನೇ ಶೈಕ್ಷಣಿಕ ಸಾಲಿನ 2 ವರ್ಷಗಳ ಡಿಪ್ಲೊಮಾ ಕೃಷಿ ಕೋರ್ಸ್‌ಗೆ ಭರ್ತಿಯಾಗದೆ ಖಾಲಿ ಉಳಿದಿರುವ ಸೀಟುಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಡಿಪ್ಲೊಮಾ (ಕೃಷಿ)ಯನ್ನು ಕನ್ನಡ ಮಾಧ್ಯಮದಲ್ಲಿ ಸೆಮಿಸ್ಟರ್ (4 ಸೆಮಿಸ್ಟರ್) ಪದ್ಧತಿಯಲ್ಲಿ ಬೋಧಿಸಲಾಗುವುದು.

ಪ್ರವೇಶ ಅರ್ಹತೆ:

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ಡಿಪ್ಲೊಮಾ (ಕೃಷಿ) ಕೋರ್ಸ್‌ಗೆ ಪ್ರವೇಶ ಕೋರುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಪಠ್ಯವನ್ನು ಭಾಷೆಯಾಗಿ ಅಭ್ಯಸಿಸಿ ಕನಿಷ್ಟ ಶೇ. 45 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. (ಪ.ಜಾ./ಪ.ಪಂ./ಪ್ರವರ್ಗ-1ರವರುಗಳಿಗೆ ಕನಿಷ್ಟ ಶೇ. 40ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು) ರೈತರ ಹಾಗೂ ಕೃಷಿಕಾರ್ಮಿಕರ ಮಕ್ಕಳಿಗೆ ಶೇ. 50 ರಷ್ಟು ಸೀಟುಗಳನ್ನು ಡಿಪ್ಲೊಮಾ (ಕೃಷಿ) ಪ್ರವೇಶಾತಿಗೆ ಮೀಸಲಿಡಲಾಗಿದೆ. ಅರ್ಜಿ ಹಾಗೂ ಮಾಹಿತಿ ಪುಸ್ತಕವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ವೆಬ್‌ಸೈಟ್ : www.uahs.edu.in ನಲ್ಲಿ ಡೌನ್ ಲೋಡ್ ಮಾಡಬಹುದು.

ಈ ರೀತಿ ವೆಬ್‌ಸೈಟ್ ಮುಖಾಂತರ ಪಡೆದು ಭರ್ತಿಮಾಡಿದ ಅರ್ಜಿಗಳನ್ನು, ಅರ್ಜಿಯ ನಿಗದಿತ ಶುಲ್ಕವನ್ನು ಡಿ.ಡಿ. ರೂಪದಲ್ಲಿ ಲಗತ್ತಿಸಿ ಮುಕ್ತ ಕೌನ್ಸಿಲಿಂಗ್ ದಿನ ತರುವುದು.

ಅರ್ಜಿ ಶುಲ್ಕ:

ಸಾಮಾನ್ಯ ವರ್ಗದವರಿಗೆ ರೂ. 500/-, ಪ.ಜಾ./ಪ.ಪಂ./ಪ್ರವರ್ಗ-1ರವರಿಗೆ ರೂ. 250/- ಆಗಿದ್ದು, ರಾಷ್ಟ್ರೀಕೃತ ಬ್ಯಾಂಕ್ (Nationalized Bank) .. Comptroller, KSNUAHS, Shivamogga – 577 412 ಇವರ ಹೆಸರಿನಲ್ಲಿ
ಪಡೆದು ಎಲ್ಲಾ ಅಗತ್ಯ ಅಡಕಗಳೊಂದಿಗೆ ಭರ್ತಿಮಾಡಿದ ಅರ್ಜಿಗಳನ್ನು ದಿನಾಂಕ: 25-10-2024 ರಂದು ಖುದ್ದಾಗಿ ಅರ್ಜಿಗಳನ್ನು ಸಲ್ಲಿಸಬೇಕು.

ಸ್ಥಳ : MP ಹಾಲ್, ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ, ಸಮಯ : 25-10-2024 ರ ಬೆಳಗ್ಗೆ 10:30 ಗಂಟೆ ನಿಗದಿತ ಸಮಯದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಪ್ರವೇಶ ಮತ್ತು ಆಯ್ಕೆ ವಿಧಾನ:

ಸರ್ಕಾರದ ಆದೇಶಗಳ ಅನ್ವಯ ಉಳಿದಿರುವ ಸೀಟುಗಳನ್ನು ಮುಕ್ತ ಕೌನ್ಸಿಲಿಂಗ್ ಆಯ್ಕೆ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ಧತಿಯನ್ನು ಅಳಪಡಿಸಿ, ಪ್ರವೇಶಕ್ಕೆ ಆಯ್ಕೆ ಮಾಡಿ ಆಯ್ಕೆಯಾದ ಅಭ್ಯರ್ಥಿಗಳು ರೂ. 6,190/- ಪ್ರವೇಶ ಶುಲ್ಕವನ್ನು ನಗದಾಗಿ ಸ್ಥಳದಲ್ಲಿಯೇ ಕಡ್ಡಾಯವಾಗಿ ಪಾವತಿಸಬೇಕಾಗಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಷ್ಟ ಪಂಗಡದ ಅಭ್ಯರ್ಥಿಗಳ ಪೋಷಕರ ಆದಾಯ ರೂ. 2.5 ಲಕ್ಷದೂಳಗಿದ್ದರೆ ಅಂತಹ ಅಭ್ಯರ್ಥಿಗಳು ರೂ. 2,610/- ಪ್ರವೇಶ ಶುಲ್ಕವನ್ನು ನಗದಾಗಿ ಸ್ಥಳದಲ್ಲಿಯೇ ಕಡ್ಡಾಯವಾಗಿ ಪಾವತಿಸಬೇಕಾಗಿರುತ್ತದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ

ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ,

ಶಿವಮೊಗ್ಗ, ಕರ್ನಾಟಕ.
ಕಾಲೇಜು ಮತ್ತು ವಿಳಾಸ

ಪ್ರಾಂಶುಪಾಲರು, ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ,

ಬ್ರಹ್ಮಾವರ – 576213, ಉಡುಪಿ ಜಿಲ್ಲೆ ಪ್ರಾಂಶುಪಾಲರು: 9480838208,

ಕಛೇರಿ : 9108241342, 9686405090

E-mail: princi-brahmavar@uahs.edu.in Website: www.uahs.edu.in

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment