SUDDIKSHANA KANNADA NEWS/ DAVANAGERE/ DATE:25-02-2025
ದಾವಣಗೆರೆ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಫೆಬ್ರವರಿ 21ರಂದು ಚನ್ನಗಿರಿ ಟೌನ್ ನ ವಾಸಿಯಾದ ಕುಬೇಂದ್ರಸ್ವಾಮಿ ಎಂಬುವವರು ಚನ್ನಗಿರಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು.
ಫೆ. 1ರಿಂದ 21ರ ಮಧ್ಯದ ಅವಧಿಯಲ್ಲಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ನ thekingofkarnataka ಹಾಗೂ dj_troll ಎಂಬ ಖಾತೆಗಳಲ್ಲಿ ಯಾರೋ ಐಡಿ ಬಳಕೆದಾರರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಸಂಬಂಧಿಸಿದಂತೆ ಅವರ ಜೀವನ ಶೈಲಿಯನ್ನು ಅವರ ಉನ್ನತ ದರ್ಜೆಯ ಡಿಗ್ರಿಗಳನ್ನು, ಮೀಸಲಾತಿಯ ಬಗ್ಗೆ ಮತ್ತು ಜೈ ಭೀಮ್ ಎನ್ನುವ ಪದದ ಬಗ್ಗೆ ಅತೀ ಕೆಟ್ಟದಾಗಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಆದ್ದರಿಂದ ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಗಳಲ್ಲಿಯೂ ಅನುಯಾಯಿಗಳಲ್ಲಿಯೂ ಮತ್ತು ಭಾರತೀಯರಿಗೆ ಮಾನಸಿಕವಾಗಿ ಧಕ್ಕೆ ಉಂಟಾಗಿರುತ್ತದೆ.
ಸಮಾಜದ ಸುವ್ಯವಸ್ಥೆ ಕೂಡ ಹಾಳಾಗುತ್ತಿದೆ ಆದ್ದರಿಂದ ಸದರಿ ಇನ್ಸ್ಟಾಗ್ರಾಂ ಐಡಿ ಬಳಕೆದಾರರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಚನ್ನಗಿರಿ ಪೊಲಿಸ್ ಠಾಣೆಯಲ್ಲಿ 353(2) ಬಿ ಎನ್ ಎಸ್ & ಕಲಂ 66(ಸಿ), 66(ಡಿ) ಐಟಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಸಾರ್ವಜನಿಕರ ಗಮನಕ್ಕೆ:
ವಾಟ್ಸಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ, ವ್ಯಕ್ತಿ ನಿಂದನೆ, ಧಾರ್ಮಿಕ ನಿಂದನೆ, ದ್ವೇಷ ಭಾಷಣ, ದೇಶ ವಿರೋಧಿ ಪೋಸ್ಟ್ ಗಳು ಸೇರಿದಂತೆ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ಮತ್ತು ಶೇರ್ ಮಾಡುವುದು ಕಾನೂನಿಗೆ ಬಾಹಿರ. ಇಂಥ ಪೋಸ್ಟ್ ಗಳನ್ನು ಮಾಡುವಂಥ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲಾತಾಣಗಳ ಬಳಕೆಯಲ್ಲಿರಲಿ ಎಚ್ಚರ ಎಂದು ಎಸ್ಪಿ ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ.