SUDDIKSHANA KANNADA NEWS/DAVANAGERE/DATE:11_11_2025
ದಾವಣಗೆರೆ: ಪ್ರಸಕ್ತ ಸಾಲಿನ ಮುಂಗಾರು ಋತುವಿನ ಕೃಷಿ ಉತ್ಪನ್ನಗಳನ್ನು ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಭತ್ತ ಮತ್ತು ರಾಗಿ ಖರೀದಿಗೆ ಜಿಲ್ಲೆಯಾದ್ಯಂತ 5 ಖರೀದಿ ಕೇಂದ್ರ ಸ್ಥಾಪನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ. ಎಂ. ತಿಳಿಸಿದರು.
READ ALSO THIS STORY: ಅಪಘಾತದಲ್ಲಿ ಮೃತಪಟ್ಟ ಶಿಕ್ಷಕನ ಕುಟುಂಬಕ್ಕೆ ಸಿಕ್ತು 1 ಕೋಟಿ ಪರಿಹಾರ! ಸಿಕ್ಕಿದ್ದು ಹೇಗೆ ಗೊತ್ತಾ?
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೆಂಬಲ ಬೆಲೆ ಕುರಿತು ರೈತ ಮುಖಂಡರೊಂದಿಗೆ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬೆಂಬಲ ಬೆಲೆಯಲ್ಲಿ ರೈತರಿಂದ ಭತ್ತ ಮತ್ತು ರಾಗಿ ಖರೀದಿಗೆ ನೋಂದಣಿ ದಿನಾಂಕವನ್ನು ಡಿಸೆಂಬರ್ ರವರೆಗೆ ಮುಂದೂಡಲಾಗಿದೆ. ರೈತರು ಭತ್ತವನ್ನು ಎಷ್ಟು ಕ್ವಿಂಟಾಲ್ ಬೇಕಾದರೂ ಖರೀದಿ ಕೇಂದ್ರಕ್ಕೆ ನೀಡಲು ನೋಂದಣಿ ಮಾಡಿಸಬಹುದು. ರೈತರು ಎಷ್ಟು ನೋಂದಾಣಿ ಮಾಡಿಸಿದರೂ ನಾವು ಅದನ್ನು ಖರೀದಿ ಮಾಡುತ್ತೆವೆ. ತಾಂತ್ರಿಕ ತೊಂದರೆಯಾಗದಂತೆ ನೋಡಿಕೊಳ್ಳುತ್ತೆವೆ ಎಂದರು.
ದಾವಣಗೆರೆಯಲ್ಲಿ ಕೆ.ಎಫ್.ಎಸ್.ಸಿ ಎ.ಪಿ.ಎಂ.ಸಿ ಆವರಣದಲ್ಲಿರುವ ಗೋದಾಮಿನಲ್ಲಿ ಭತ್ತ ಮತ್ತು ರಾಗಿ, ಹೊನ್ನಾಳಿ ಕೆ.ಎಫ್.ಎಸ್.ಸಿ ಎ.ಪಿ.ಎಂ.ಸಿ ಆವರಣದಲ್ಲಿರುವ ಗೋದಾಮಿನಲ್ಲಿ ಭತ್ತ ಮತ್ತು ರಾಗಿ, ಜಗಳೂರು ಕೆ.ಎಫ್.ಎಸ್.ಸಿ ಎ.ಪಿ.ಎಂ.ಸಿ ಆವರಣದಲ್ಲಿರುವ
ಗೋದಾಮಿನಲ್ಲಿ ರಾಗಿ, ಹರಿಹರ ಕೆ.ಎಫ್.ಎಸ್.ಸಿ ಎ.ಪಿ.ಎಂ.ಸಿ ಆವರಣದಲ್ಲಿರುವ ಗೋದಾಮಿನಲ್ಲಿ ಭತ್ತ ಮತ್ತು ರಾಗಿ, ಚನ್ನಗಿರಿ ಕೆ.ಎಫ್.ಎಸ್.ಸಿ ಎ.ಪಿ.ಎಂ.ಸಿ ಆವರಣದಲ್ಲಿರುವ ಗೋದಾಮಿನಲ್ಲಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ
ಎಂದು ಮಾಹಿತಿ ನೀಡಿದರು.
ಕ್ವಿಂಟಾಲ್ ರಾಗಿ ರೂ.4,886, ಸಾಮಾನ್ಯ ಭತ್ತಕ್ಕೆ ರೂ.2,369, ಗ್ರೇಡ್-ಎ ಭತ್ತಕ್ಕೆ ರೂ.2,389 ನ್ನು ನಿಗಧಿಪಡಿಸಲಾಗಿದೆ. ಇಲ್ಲಿಯವರೆಗೆ ಭತ್ತಕ್ಕೆ 18 ಜನ ನೋಂದಣಿ ಮಾಡಿಸಿದ್ದು, ರಾಗಿಗೆ 1800 ಜನ ನೋಂದಣಿ ಮಾಡಿಸಲಾಗಿದೆ ಎಂದರು.
ರೈತರು ಪ್ರತಿ ತಾಲ್ಲೂಕುಗಳಲ್ಲಿ ಬೆಂಬಲ ಬೆಲೆಗೆ ನೋಂದಣಿ ಮಾಡಿಸಬೇಕು. ಎಲ್ಲಾ ರೈಸ್ಮಿಲ್ಗಳಲ್ಲಿ ತೂಕದ ಯಂತ್ರವನ್ನು ಪರೀಕ್ಷಿಸಲಾಗುವುದು. ಎ.ಪಿ.ಎಂ.ಸಿಯಲ್ಲಿರುವ ಎಲೆಕ್ಟ್ರಾನಿಕ್ ವೇಬ್ರಿಡ್ಜ್ ನ್ನು ಶ್ರೀಘ್ರವಾಗಿ ಸರಿಮಾಡಿಸಿ ಕೊಡಲಾಗುವುದು. ಎಪಿಎಂಸಿ ದಲ್ಲಾಲಿ ಮಂಡಿಗಳಲ್ಲಿ ಖರೀದಿಗೆ
ಬಿಡುವ ರೈತರಿಂದ ಸೂಟ್ ಆಗಿ ಹೆಚ್ಚುವರಿ ತೂಕವನ್ನು ಪಡೆಯಲಾಗುತ್ತಿದೆ. ಎಂದು ರೈತರಿಂದ ದೂರು ಬರುತ್ತಿದೆ. ಹೆಚ್ಚುವರಿ ತೂಕ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಯಾರದರೂ ದಲಾಲರೂ ರೈತರಿಂದ ಈ ರೀತಿ ಪಡೆದಲ್ಲಿ ಮತ್ತು ರೈತರಿಂದ ಕಮಿಷನ್ ಪಡೆದಲ್ಲಿಯೂ ಸಹ ಕಠಿಣಕ್ರಮ ಜರುಗಿಸಲಾಗುವುದು. ಇಂತಹ ದೂರನ್ನು ಅನಾಮಧೇಯವಾಗಿ ನೀಡಿದರೂ ಕೂಡ ಕ್ರಮಕೈಗೊಳ್ಳುತ್ತೇವೆ ಎಂದರು. ತೂಕದ ಅಳತೆಯಲ್ಲಿ ವ್ಯತ್ಯಾಸ, ತೊಂದರೆ ಕಂಡು ಬಂದಲ್ಲಿ ಅದರ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಗ್ರಾಮಗಳಲ್ಲಿ ಧಾನ್ಯಗಳನ್ನು ಖರೀದಿ ಮಾಡಿದರೆ ನಿರ್ದಾಕ್ಷಣಾವಾಗಿ ಕ್ರಮ ಕೈಗೊಳ್ಳಲಾಗುವುದು. ರೈತರ ಮನವಿಯಂತೆ ಆನ್ಲೈನ್ ಪ್ರೂಟ್ ತಂತ್ರಾAಶದಲ್ಲಿ ನೇರವಾಗಿ ನೋಂದಾಣಿ ಮಾಡಿಸಲು ಪಾಸ್ ಬುಕ್ ತೆಗೆದುಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹರಿಹರದಲ್ಲಿ ಆನ್ಲೈನ್ ಇ-ಟೆಂಡರ್ ಮಾಡಿಸುತ್ತವೆ ಎಂದು ಭರವಸೆ ನೀಡಿದರು. ಎ.ಪಿ.ಎಂ.ಸಿ ಯಲ್ಲಿರುವ ವೇ ಬ್ರಿಡ್ಜ್ ನಲ್ಲಿ ತೂಕದ ಚೀಟಿಯಲ್ಲಿ ಬೆಳೆ ಬೆಳೆದ ರೈತರ ಹೆಸರು ಹಾಗೂ ಖರೀದಿದಾರರ ಹೆಸರನ್ನು ನಮೂದಿಸಲು ಸೂಚಿಸಿದರು. ಟಾಸ್ಕ್ ಪೋರ್ಸ್ ಸಮಿತಿಯ ಅಧಿಕಾರಿಯವರು ಜಂಟಿಯಾಗಿ ಕೆಲಸ ನಿರ್ವಹಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿನಿರ್ದೇಶಕರಾದ ಮಧುಸೂದನ್, ಕೃಷಿ ಇಲಾಖೆಯ ಅಧಿಕಾರಿ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಘವೇಂದ್ರ ಪ್ರಸಾದ್, ಬೆಸ್ಕಾಂ ಅಧಿಕಾರಿ ಪ್ರವೀಣ, ರೈತ ಮುಖಂಡರಾದ ನಾಗರಾಜ, ತೇಜಸ್ವಿನಿ ಪಟೇಲ್, ಈರಣ್ಣ, ಮಂಜಣ್ಣ ಉಪಸ್ಥಿತರಿದ್ದರು.


