ದಾವಣಗೆರೆ: ಎಸ್.ಆರ್.ಎಸ್ ಚಿತ್ರದುರ್ಗ ವಿ.ವಿ.ಕೇಂದ್ರದಲ್ಲಿ ಬರುವ 100ಎಂವಿಎ ಪರಿವರ್ತಕವು ವಿಫಲಗೊಂಡಿದ್ದು ಈ ಪರಿವರ್ತಕದ ಬದಲಾವಣೆ ಕಾಮಗಾರಿಯು ಚಾಲನೆಯಲ್ಲಿರುವ ಪ್ರಯುಕ್ತ 66/11 ಕೆವಿ ವಿ.ವಿ.ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಜಗಳೂರು, ಸೊಕ್ಕೆ, ಪಲ್ಲಾಗಟ್ಟೆ ಮತ್ತು ಬಿಳಿಚೋಡು ವಿ.ವಿ.ಕೇಂದ್ರಗಳಿಂದ ಸರಬರಾಜು ಆಗುವ ಎಲ್ಲಾ ಐ.ಪಿ. ಮಾರ್ಗಗಳಿಗೆ ಬೆಳಗ್ಗೆ ಪಾಳೆಯಲ್ಲಿ 2.30 ಗಂಟೆ ಮತ್ತು ರಾತ್ರಿ ಪಾಳಿಯಲ್ಲಿ 3 ಗಂಟೆಗಳು ತಾತ್ಕಲಿಕವಾಗಿ ವಿದ್ಯುತ್ ನೀಡಲಾಗುತ್ತಿದ್ದು, ಚಿತ್ರದುರ್ಗದಲ್ಲಿ ವಿಫಲವಾದ ಪರಿವರ್ತಕದ ಕಾಮಗಾರಿಯು ಪೂರ್ಣಗೊಳ್ಳುವವರೆಗೂ ರೈತ ಬಾಂಧವರು ಸಹಕರಿಸಬೇಕೆಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.








