SUDDIKSHANA KANNADA NEWS/ DAVANAGERE/ DATE-09-06-2025
ದಾವಣಗೆರೆ: ದಾವಣಗೆರೆ ನಗರದ ವಿವಿಧೆಡೆ ಜೂನ್ 10ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ದಾವಣಗೆರೆಯ 66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಸುವ ವಿವಿಧ ಬಡಾವಣೆಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಇರುವುದಿಲ್ಲ.
ಸಿದ್ದವೀರಪ್ಪ ಬಡಾವಣೆ,ಎಸ್.ಎಸ್. ಲೇಔಟ್ ಎ ಬ್ಲಾಕ್,ಕುವೆಂಪು ನಗರ,ಎಂ.ಸಿ.ಸಿ. ಬಿ ಬ್ಲಾಕ್, ಬಾಪೂಜಿ ಸ್ಕೂಲ್, ಬಿ.ಐ.ಇ.ಟಿ. ಕಾಲೇಜು, ಗ್ಲಾಸ್ ಹೌಸ್, ಸುಕ್ಷೇಮಾ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.