SUDDIKSHANA KANNADA NEWS/ DAVANAGERE/ DATE:16-11-2024
ದಾವಣಗೆರೆ: ಯರಗುಂಟೆ ವಿ.ವಿ ಕೇಂದ್ರ ದಿಂದ ಹೊರಡುವ ಚಿತ್ರಾನಹಳ್ಳಿ, ದೇವರಹಟ್ಟಿ, ಅಮೃತನಗರ, ಮಾರ್ಗದ ತುರ್ತು ಕಾಮಗಾರಿ ಇರುವುದರಿಂದ ನವಂಬರ್ 16 ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ದೊಡ್ಡಬೂದಿಹಾಳು, ಚಿಕ್ಕಬೂದಿಹಾಳು, ದೇವರಹಟ್ಟಿ, ಬಿ.ಕಲ್ಪನಹಳ್ಳಿ, ಚಿತ್ತಾನಹಳ್ಳಿ, ಅಮೃತನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.