SUDDIKSHANA KANNADA NEWS/ DAVANAGERE/ DATE:26-02-2025
ಬೆಂಗಳೂರು: ನಟಿ ನಿವೇದಿತಾ ಗೌಡ ಡಿವೋರ್ಸ್ ಆದ ಮೇಲೆ ಫುಲ್ ಬಿಚ್ಚಮ್ಮ ಆಗಿಬಿಟ್ಟಿದ್ದಾರೆ. ರೀಲ್ಸ್ ನೋಡಿದವರೆಲ್ಲಾ ಏನಮ್ಮಾ ನಿನ್ನ ಅವತಾರ ಎಂದು ಕೇಳುವಂತಾಗಿದೆ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ನಿವೇದಿತಾ ಗೌಡ ರೀಲ್ಸ್ ಮಾಡುವುದನ್ನು ಬಿಟ್ಟಿಲ್ಲ.
ಜೊತೆಗೆ ಇನ್ಟಾಗ್ರಾಂನಲ್ಲಿ ಸಂದೇಶಗಳನ್ನು ಒಂದೊಂದಾಗಿ ಹರಿಬಿಡುತ್ತಿದ್ದಾರೆ. ಒಮ್ಮೊಮ್ಮೆ ರ್ಯಾಪ್ ಸ್ಟಾರ್ ಚಂದನ್ ಶೆಟ್ಟಿಗೆ ಡಿವೋರ್ಸ್ ಕಾರಣಗಳಂತಿದ್ದರೆ, ಮತ್ತೊಂದೆಡೆ ನಿಗೂಢಾರ್ಥ ಹೊಂದಿರುತ್ತವೆ. ಇದು ನೆಟ್ಟಿಗರ ಕುತೂಹಲಕ್ಕೂ ಕಾರಣವಾಗಿದೆ.
ನನಗೆ ನೀನು ಬೇಕು ಡಿಯರ್. ನನಗೆ ನಿನ್ನಂತಹ ಪಾರ್ಟ್ನರ್ ಬೇಕು ಎಂದು ಕೆಲವರು ಕಮೆಂಟ್ ಮಾಡಿದ್ದು ನಿವೇದಿತಾ ಗೌಡ ಸಖತ್ತಾಗಿಯೇ ಕೌಂಟರ್ ಕೊಟ್ಟಿದ್ದಾರೆ. ನೋ… ನೋ.. ಅವಳು ನನ್ನ ಪಾರ್ಟ್ನರ್, ಯಾರಿಗೂ ಅವಳು ಸಿಗಲ್ಲ. ಅವಳು ನನ್ನವಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ ನಿವೇದಿತಾ ಗೌಡ.
ನಾವು ಎವರೇಜ್ ಬಾರ್ ಡ್ಯಾನ್ಸರ್ಸ್ ಅಲ್ಲ, ನಾವು ಗುಡ್ ಬಾರ್ ಡ್ಯಾನ್ಸರ್ಸ್ ಎಂದು ನಿವೇದಿತಾ ಹೇಳಿದ್ದಾರೆ. ನಟಿ ಇತ್ತೀಚೆಗೆ ಒಂದು ಪೋಸ್ಟ್ ಶೇರ್ ಮಾಡಿದ್ದು ಅದರಲ್ಲಿ ಬ್ಲ್ಯಾಕ್ ಡ್ರೆಸ್ ಧರಿಸಿಕೊಂಡು ರೀಲ್ಸ್ ಮಾಡಿದ್ದಾರೆ. ಆದರೆ ಇಲ್ಲಿ ರೀಲ್ಸ್ ಅಲ್ಲ ನಟಿ ರೀಲ್ಸ್ ವಿಡಿಯೋಗೆ ಕೊಟ್ಟಿರೋ ಕ್ಯಾಪ್ಶನ್ ಭಾರೀ ಸೌಂಡ್ ಮಾಡ್ತಿದೆ. ಅಷ್ಟಕ್ಕೂ ನಟಿ ಹೇಳಿದ್ದೇನು? ನಟಿ ಈ ಮೂಲಕ ಡಿವೋರ್ಸ್ ಕಾರಣ ರಿವೀಲ್ ಮಾಡಿಯೇ ಬಿಟ್ರಾ? ಎಂಬ ಕುತೂಹಲವೂ ಗರಿಗೆದರುವಂತೆ ಮಾಡಿದೆ.
ನನ್ನ ಬೆಸ್ಟ್ ಫ್ರೆಂಡ್ ನನ್ನ ಮಿತಿಗಳನ್ನು ಹೆಚ್ಚಿಸಿದ್ದಾರೆ. ಹೀಗಾಗಿ ನಾನು ಈಗ ನನಗಾಗಿ ಸಿಂಹಾಸನ, ಕಿರೀಟ, ಹಾಗೂ ರಾಜ್ಯವನ್ನು ತರುವಂತಹ ವ್ಯಕ್ತಿಯನ್ನು ನಿರೀಕ್ಷಿಸುತ್ತಿದ್ದೇನೆ ಎಂದು ನಿವೇದಿತಾ ಗೌಡ ಬರೆದಿದ್ದಾರೆ. ಚಂದನ್ ಶೆಟ್ಟಿ ಕೈಯಲ್ಲಿ ಇದ್ಯಾವುದೂ ಸಾಧ್ಯವಾಗಿಲ್ಲ ಎಂಬುದು ಅರ್ಥವೇ ಎಂದು ಸ್ಪಷ್ಟಪಡಿಸಿಲ್ಲ. ನಿವಿ ಮತ್ತು ಚಂದನ್ ಶೆಟ್ಟಿ ನಡುವೆ ಬಂದ ಆ ಗೆಳತಿ ಯಾರು ಎಂಬುದು ಮಾತ್ರ ನಿಗೂಢವಾಗಿದೆ.