SUDDIKSHANA KANNADA NEWS/ DAVANAGERE/ DATE:22-10-2023
ಬೆಂಗಳೂರು: ಸಾಹಿತ್ಯ (Literature) ಲೋಕವೇ ಹಾಗೆ. ಎಲ್ಲರನ್ನೂ ತನ್ನತ್ತ ಸೆಳೆದುಕೊಂಡರೂ ಒಡಲಲ್ಲಿ ಕೆಲವರು ಮಾತ್ರ ಹೆಸರು ಮಾಡುತ್ತಾರೆ. ಕನ್ನಡ ಭಾಷೆ, ನುಡಿ, ಸಂಸ್ಕೃತಿ, ಜನಪದ ಸೇರಿದಂತೆ ಎಲ್ಲಾ ಪ್ರಕಾರಗಳಲ್ಲಿಯೂ ಕೆಲಸ ಮಾಡಿರುವ ಸಾಹಿತಿಗಳ ಸಂಖ್ಯೆ ಅಪಾರ. ಕೊಡುಗೆ ಬಣ್ಣಿಸಲು ಆಗದು. ಕನ್ನಡ ಸಾರಸ್ವತ ಲೋಕ ಅಷ್ಟೊಂದು ಶ್ರೀಮಂತವಾಗಿದೆ. ಸಾಹಿತ್ಯ ಲೋಕದಲ್ಲಿ ಮಿಂಚು ಹರಿಸುತ್ತಿರುವ ಪವಿತ್ರಾ ಬದ್ರಿನಾಥ್ ಅವರು ಬರೆದಿರುವ ನಿಶಾಚರ ಕಾದಂಬರಿ ಕುತೂಹಲ ಹುಟ್ಟಿಸುವಂಥದ್ದು.
ಇದೊಂದು ಹಾರರ್ ಲವ್ ಸ್ಟೋರಿ. ಇತ್ತೀಚಿನ ದಿನಗಳಲ್ಲಿ ಬರಹಗಾರರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೊರಗಿದ್ದರೂ ಆಸಕ್ತಿ ಹೊಂದಿರುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಕಥೆ, ಕವನ, ಚುಟುಕು, ಕಾದಂಬರಿ ಬರೆಯುವ ಪವಿತ್ರಾ ಬದ್ರಿನಾಥ್ ಅವರೂ ಸಹ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
Read Also This Story:
Big Exclusive: ಚೈತ್ರಾ ಟಿಕೆಟ್ (Ticket) ಕೋಟಿ ಕೋಟಿ ಡೀಲ್ ಮಾಸುವ ಮುನ್ನ ಮತ್ತೊಂದು ಟಿಕೆಟ್ ಡೀಲ್, 2.55 ಕೋಟಿ ರೂ. ವಂಚನೆ ಆರೋಪ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಪ್ರಸ್ತಾಪಿಸಿದ್ದೇಕೆ…?
ಸಿಲಿಕಾನ್ ಸಿಟಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸ ಇರುವ ಪವಿತ್ರಾ ಬದ್ರಿನಾಥ್ ಅವರಿಗೆ ಕನ್ನಡ ಭಾಷೆ ಮೇಲೆ ಅದಮ್ಯ ಪ್ರೀತಿ. ದಿನದಲ್ಲಿ ಏನಾದರೂ ಬರೆಯಬೇಕೆಂಬ ಹಂಬಲ. ಆಸಕ್ತಿ ಜೊತೆಗೆ ತನ್ನ ಕೈಯಲ್ಲಾದಷ್ಟು ಸೇವೆ ಸಲ್ಲಿಸಬೇಕು ಎಂಬ ಅದಮ್ಯ ತುಡಿತ ಇದೆ.
ಕನ್ನಡ ಸಾಹಿತ್ಯ ಪರಿಷತ್ ನ ಸದಸ್ಯರೂ ಆಗಿರುವ ಪವಿತ್ರಾ ಅವರು, ಸ್ಟೋರಿಸ್, ಕವನ, ಕಾದಂಬರಿ, ಲೇಖನ, ಫಿಲ್ಟ್ ಸ್ಕ್ರಿಪ್ಟ್ ಬರೆಯುವುದರಲ್ಲಿ ಸೈ ಎನಿಸಿಕೊಂಡ ಲೇಖಕಿ. ನಿಶಾಚರಿ ಎಂಬ ಕಾದಂಬರಿ ಬರೆದಿರುವ ಪವಿತ್ರಾ ಅವರ ಬರವಣಿಗೆಗೆ ಎಲ್ಲರೂ ಫಿದಾ ಆಗಿದ್ದಾರೆ. ಈ ಕಾದಂಬರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಓದಿದವರು ಅವರಿಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.
ನಿಶಾಚಾರ ಇದೊಂದು ಹಾರರ್ ಲವ್ ಸ್ಟೋರಿ. ಈ ಕಥೆ ಹೇಗೆ ಸಾಗುತ್ತದೆ, ಹೇಗೆ ಮುಗಿಯುತ್ತದೆ ಎಂಬುದು ಓದುಗರಿಗೆ ಗೊತ್ತಾಗುವುದಿಲ್ಲ. ಅಷ್ಟು ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ. ಅಷ್ಟು ಕುತೂಹಲಭರಿತ ಕಾದಂಬರಿ ಇದಾಗಿದೆ. ಇದಕ್ಕಾಗಿ ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಿರುವ ಪವಿತ್ರಾ ಅವರು ಬೇರೆ ಹಾರರ್ ಲವ್ ಸ್ಟೋರಿಗಿಂತ ವಿಭಿನ್ನವಾಗಿ ಪ್ರಸ್ತುತಪಡಿಸಿದ್ದಾರೆ. ನಿಗೂಢ ಪ್ರೀತಿಯ ಹುಡುಕಾಟದಲ್ಲಿ ಎಂಬ ವಾಕ್ಯ ಪ್ರತಿಯೊಬ್ಬರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಸಾಧ್ಯವಾದರೆ ನೀವೂ ಒಮ್ಮೆ ಈ ಕಾದಂಬರಿ ಓದಿ.
ಯಾವುದೇ ಕವನ ಬರೆದರೂ ಅದರಲ್ಲೊಂದು ಅರ್ಥ ಇರುತ್ತದೆ. ಸಮಾಜಕ್ಕೆ ಸಂದೇಶ ಇರುತ್ತದೆ. ಅಷ್ಟೊಂದು ಗಂಭೀರತೆ ಈ ಕವನಗಳಲ್ಲಿ ಇರುತ್ತದೆ ಎಂದರೆ ಅತಿಶಯೋಕ್ತಿ ಅಲ್ಲ. ಕಥೆ, ಕಾದಂಬರಿ, ಲೇಖನಗಳನ್ನು ಸಾಧ್ಯವಾದಷ್ಟು ಬರೆಯಬೇಕು ಎಂಬ ಹೆಬ್ಬಯಕೆಯಿಂದ ಇದಕ್ಕಾಗಿ ಸಾಕಷ್ಟು ಶ್ರಮ ವಹಿಸುತ್ತಾರೆ.
ಸದಾ ಕ್ರಿಯಾಶೀಲರಾಗಿರುವ ಪವಿತ್ರಾ ಬದ್ರಿನಾಥ್ ಅವರು ಬರೆದಿರುವ ನಿಶಾಚರ ಕಾದಂಬರಿಗೆ ಸಾಹಿತಿ ಡಾ. ಎಸ್. ಜಿ. ಮಾಲತಿ ಶೆಟ್ಟಿ ಅವರು ಹಿನ್ನುಡಿ ಬರೆದುಕೊಟ್ಟಿದ್ದಾರೆ. ಈ ಕಥೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆತ್ಮದ ಪ್ರೀತಿ ಬಗ್ಗೆ ಹೆಣೆದಿರುವ ಕಥೆ ರೋಮಾಂಚನಕಾರಿಯಾಗಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
ಬಂದಿರುವ ಪ್ರಶಸ್ತಿಗಳು:
ಕನ್ನಡ ಸೇವಾ ರತ್ನ ಪ್ರಶಸ್ತಿ, ಲಲಿತಾ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ ಸರ್ಟಿಫಿಕೇಟ್ ಕೂಡ ಪಡೆದಿರುವ ಪವಿತ್ರಾ ಅವರು, ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಒಟ್ಟಿನಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ
ತನ್ನದೇ ಆದ ರೀತಿಯಲ್ಲಿ, ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿರುವ ಪವಿತ್ರಾ ಬದ್ರಿನಾಥ್ ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬ ಹಾರೈಕೆ ಕುಟುಂಬದವರು, ಸ್ನೇಹಿತರದ್ದಾಗಿದೆ. ಬರಹಗಾರ್ತಿ ಪವಿತ್ರಾ ಅವರ ಈ ಪ್ರಯತ್ನಕ್ಕೆ ಪತಿ ಬದ್ರಿನಾಥ್ ಅವರ ಸಹಕಾರ ಇದೆ.
—————————————–
ಜಾಹೀರಾತು:
ವಧು ವರ ಮಾಹಿತಿ ಕೇಂದ್ರ
ನಮ್ಮಲ್ಲಿ ಎಲ್ಲಾ ಜಾತಿಯವರು ಹಾಗೂ ಎಲ್ಲಾ ವರ್ಗವದರು ಇದ್ದಾರೆ. ಮೊದಲ ಹಾಗೂ ಎರಡನೇ ಮದುವೆಗೆ ಹಾಗೂ ನಮ್ಮಲ್ಲಿ 2 ಲಕ್ಷ ಪ್ರೊಫೈಲ್ ಇದೆ. ನಿಮ್ಮಲ್ಲಿ ಎಂಥ ಸಮಸ್ಯೆ ಇದ್ದರೂ ಕೇವಲ ಮೂರು ತಿಂಗಳಲ್ಲಿ ಮದುವೆ ಹೊಂದಿಸಿ ಕೊಡುತ್ತೇವೆ ಹಾಗೂ ಅಂತರಜಾತಿ ಮದುವೆ ಹೆಚ್ಚಾಗಿ ಮಾಡಿಸುತ್ತೇವೆ. ಒಮ್ಮೆ ಭೇಟಿ ಕೊಡಿ ಅಥವಾ ಕರೆ ಮಾಡಿ ಮೊಬೈಲ್ ನಂಬರ್: 99455 00051, ವಾಟ್ಸಪ್ ನಂಬರ್ 98443 50220.
——————————