ಬೆಂಗಳೂರು: ಹೊಸ ವರ್ಷಾಚರಣೆಗೆ ಬಾರ್& ರೆಸ್ಟೋರೆಂಟ್, ಕ್ಲಬ್ ಮತ್ತು ಪಬ್ ಗಳಲ್ಲಿ ನಿಯೋಜಿಸುವ ಬೌನ್ಸರ್ ಗಳ ಜೊತೆ ಪೋಲಿಸರು ಸಭೆ ನಡೆಸಿದ್ದಾರೆ.
ನಗರದಲ್ಲಿರುವ ಪಬ್ ಮತ್ತು ಕ್ಲಬ್ ಹಾಗೂ ಬಾರ್& ರೆಸ್ಟೋರೆಂಟ್ ಗಳಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಡಿ.ಸಿ.ಪಿ ಎಚ್.ಟಿ ಶೇಖರ್ ತಿಳಿಸಿದ್ದಾರೆ.
ಹೊಸವರ್ಷಚಾರಣೆಗೆ ಬರುವ ಯುವ ಸಮೂಹದ ಜೊತೆ ಹೇಗೆ ವರ್ತಿಸಬೇಕು, ಮದ್ಯದ ಅಮಲಿನಲ್ಲಿ ಬರುವ ಜನರಿಂದ ತೊಂದರೆಯಾದರೆ ಅವರನ್ನು ಹೇಗೆ ಪೋಲಿಸರಿಗೆ ತಿಳಿಸಬೇಕು ಎಂಬುದರ ಬಗ್ಗೆ ಸಭೆ ನಡೆಸಲಾಗಿದೆ.
ಇನ್ನೂ ಬಾರ್& ರೆಸ್ಟೋರೆಂಟ್, ಪಬ್ ಮತ್ತು ಕ್ಲಬ್ ಗಳ ಮಾಲೀಕರು ಮತ್ತು ಮ್ಯಾನೇಜರ್ ಗಳ ಜೊತೆಗೂ ಸಭೆ ನಡೆಸಿ ಪಾಲಿಸಬೇಕಾದ ಅನುಕ್ರಮಗಳ ಬಗ್ಗೆ ಸಮಲೋಚಿಸಿ, ಹೊಸವರ್ಷಕ್ಕೆ ಮಾರ್ಗಸೂಚಿಗಳ ಅಡಿಯಲ್ಲಿ ಹೇಗೆ ಪಾರ್ಟಿ ಅಯೋಜನೆ ಮಾಡಬೇಕು ಎಂಬುದರ ಬಗ್ಗೆ ಸುಧೀರ್ಘ ಸಮಲೋಚನೆ ನಡೆಸಿದರು.
ಅನುಚಿತವಾಗಿ ವರ್ತಿಸುವ ಸಾರ್ವಜನಿಕರ ಜೊತೆ ತಾಳ್ಮೆ ಕಳೆದುಕೊಳ್ಳದೆ ಅವರೊಂದಿಗೆ ಹೇಗೆ ವರ್ತಿಸಬೇಕು ಅಂತವರನ್ನು ಹೇಗೆ ಪೋಲಿಸರಿಗೆ ಒಪ್ಪಿಸಬೇಕೆಂಬುದರ ಬಗ್ಗೆ ತಿಳಿಸಲಾಗಿದೆ ಎಂದು ಡಿ.ಸಿ.ಪಿ ಎಚ್.ಟಿ.ಶೇಖರ್ ಹೇಳಿದರು