SUDDIKSHANA KANNADA NEWS/ DAVANAGERE/ DATE:01-01-2025
ದಾವಣಗೆರೆ.ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಸೂಚನೆ ಮೇರೆಗೆ ಹರಪನಹಳ್ಳಿ ತಾಲ್ಲೂಕಿನ ಕಡತಿ ಗ್ರಾಮಕ್ಕೆ ನೂತನ ಬಸ್ ಮಾರ್ಗ ಕಲ್ಪಿಸಲಾಗಿದ್ದು ಗ್ರಾಮಸ್ಥರ ಬಹುದಿನದ ಕನಸು ಈಡೇರಿದೆ.
ನೂತನ ವರ್ಷಕ್ಕೆ ಸಂಸದರಿಂದ ಬಸ್ ಸೌಲಭ್ಯ ಪಡೆದ ಕಡತಿ ಗ್ರಾಮಸ್ಥರು ಸಂಸದರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದಿನಿಂದ ದಾವಣಗೆರೆಯಿಂದ ಕೊಂಡಜ್ಜಿ, ದುಗ್ಗಾವತಿ, ಕಡತಿ, ಹಲುವಾಗಲು,ಮೈಲಾರ ಹೊಳಲು ಮಾರ್ಗದಲ್ಲಿ ನೂತನ ಬಸ್ ಸಂಚರಿಸಲಿದೆ.ಈ ಬಗ್ಗೆ ಕಡತಿ ಗ್ರಾಮಸ್ಥರು ಸಂಸದರಿಗೆ ಮನವಿ ಸಲ್ಲಿಸಿದ್ದರು.
ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಹೆಚ್ ಸಿದ್ದೇಶ್ವರ್ ಅವರೊಂದಿಗೆ ಚರ್ಚೆ ನಡೆಸಿ ಬಸ್ ಸೌಲಭ್ಯ ಒದಗಿಸಿದ್ದಾರೆ.ಸಂಸದರಿಂದ ನೂತನ ವರ್ಷದ ಕೊಡುಗೆಗೆ ಕಡತಿ ಗ್ರಾಮಸ್ಥರು ಅಭಿನಂದನೆ ಅರ್ಪಿಸಿದ್ದಾರೆ. ಸಾರ್ವಜನಿಕರು ಉಪಯೋಗಮಾಡಿಕೊಳ್ಳಬೇಕಾಗಿ ಮನವಿ ಮಾಡಿದ್ದಾರೆ.