SUDDIKSHANA KANNADA NEWS/DAVANAGERE/DATE:12_11_2025
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಹೊಣೆಗಾರಿಕೆಯನ್ನು ‘ಮುಖ್ಯಮಂತ್ರಿ ಮೋದಿ’ಗಿಂತ ಉತ್ತಮವಾಗಿ ಯಾರೂ ಬಯಲು ಮಾಡಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
READ ALSO THIS STORY: “ಡಾ. ಶಾಹೀನ್ ನಡವಳಿಕೆಯೇ ವಿಚಿತ್ರ, ಶಿಸ್ತು ಪಾಲಿಸ್ತಿರಲಿಲ್ಲ”: ಹೇಳದೇ ಕೇಳದೇ ಎಲ್ಲೆಲ್ಲಿಗೋ ಹೋಗುತ್ತಿದ್ದಳು!
ಪ್ರಧಾನಿಯವರ ಪಾಲಿಗೆ ಹೊಣೆಗಾರಿಕೆ ಎಂಬುದು ಇತರರಿಗೆ ಮಾತ್ರ ಅನ್ವಯಿಸುವ ಒಂದು ಸದ್ಗುಣವೆಂದು ತೋರುತ್ತದೆ. ವಿರೋಧ ಪಕ್ಷದಲ್ಲಿದ್ದಾಗ, ಅವರು ಹೊಣೆಗಾರಿಕೆ ಕುರಿತು ಪದೇ ಪದೇ ಆಗ್ರಹಿಸುತ್ತಾರೆ. ಆದರೆ ಅಧಿಕಾರದಲ್ಲಿದ್ದಾಗ, ಅವರು ಅದರಿಂದ ಪೂರ್ತಿಯಾಗಿ ನುಣುಚಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ಒಬ್ಬ ಪಲಾಯನವಾದಿ. ಅವರು ತಪ್ಪಿಸಿಕೊಳ್ಳುವ ಸ್ವಭಾವದವರು. ಪತ್ರಿಕಾಗೋಷ್ಠಿಗಳಿಂದ ತಪ್ಪಿಸಿಕೊಳ್ಳುತ್ತಾರೆ, ಸಂಸತ್ತನ್ನು ಕಡೆಗಣಿಸುತ್ತಾರೆ ಮತ್ತು ಪ್ರತಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ವಿಷಯಾಂತರ ಮಾಡುತ್ತಾರೆ ಎಂದು ಎಕ್ಸ್ ಖಾತೆಯಲ್ಲಿ ಹಳೆಯ ವಿಡಿಯೋ ಹಂಚಿಕೊಂಡು ಕಿಡಿಕಾರಿದ್ದಾರೆ.


