SUDDIKSHANA KANNADA NEWS/ DAVANAGERE/ DATE:25-10-2023
ಬೆಂಗಳೂರು: ಮೈಸೂರು ದಸರಾ ಶಾಂತಿಯುತವಾಗಿ, ವೈಭವೋಪೇತವಾಗಿ ನಡೆಯಿತು. ಸಣ್ಣ ಗಲಾಟೆಯೂ ನಡೆಯದೇ ಚೆನ್ನಾಗಿ ನಡೆದಿದೆ. ಅಧಿಕಾರಿಗಳು ತಂಡವಾಗಿ ಕೆಲಸ ಮಾಡಿದ್ದಾರೆ. ರಾಜಕಾರಣಿಗಳು, ಶಾಸಕರು, ಸಂಸದರು ಸಹಕಾರ ನೀಡಿದರು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.
READ ALSO THIS STORY:
2030ಕ್ಕೆ ಜಪಾನ್ ಹಿಂದಿಕ್ಕಿ ಏಷ್ಯಾದಲ್ಲಿ 2 ನೇ ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರವಾಗಲಿದೆ ಭಾರತ (India)…! ಅದು ಹೇಗೆ ಗೊತ್ತಾ…?
ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಚಿವ ಮಹಾದೇವಪ್ಪ ವೈಯಕ್ತಿಕವಾಗಿ ಆಸಕ್ತಿ ತೆಗೆದುಕೊಂಡು ಯಶಸ್ವಿಯಾಗಲು ಪ್ರಮುಖ ಕಾರಣಕರ್ತರಾದರು. ಮೈಸೂರು ದಸರಾ ನಾಡಹಬ್ಬ, ಜನರ ಹಬ್ಬ.
ಜನರು ಬದಲಾವಣೆ ಮಾಡಲು ಕೇಳಿದರೆ ಬದಲಾವಣೆ ಮಾಡೋಣ. ಜನರ ಅಭಿಪ್ರಾಯವೇ ಅಂತಿಮ ಎಂದು ಸ್ಪಷ್ಟಪಡಿಸಿದರು.
ರಾಮನಗರವನ್ನು ಬೆಂಗಳೂರಿಗೆ ಸೇರ್ಪಡೆ ಮಾಡುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ನನಗೇನೂ ಗೊತ್ತಿಲ್ಲ. ಅವರನ್ನೇ ಹೋಗಿ ಕೇಳಿ. ಇನ್ನು ಚರ್ಚೆ ನಡೆದಿಲ್ಲ. ಅವರ ತಲೆಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಕುಮಾರಸ್ವಾಮಿ ಏನು ಆರೋಪ ಮಾಡಿದ್ದಾರೋ ಗೊತ್ತಿಲ್ಲ. ಡಿ. ಕೆ. ಶಿವಕುಮಾರ್ ಅವರು ಚರ್ಚೆ ನಡೆಸಿಲ್ಲ, ಚರ್ಚೆ ಬಳಿಕ ಮಾತನಾಡೋಣ ಎಂದರು.
ಎಲ್ಲಾ ಶಾಸಕರಿಗೂ ಮಂತ್ರಿಗಳಾಗಬೇಕು ಎಂಬ ಆಸೆ ಇಟ್ಟುಕೊಳ್ಳುವುದು ತಪ್ಪಲ್ಲ. ಮಂತ್ರಿ ಮಂಡಲ ವಿಸ್ತರಣೆ ನಾನು ಮಾಡಲು ಆಗುತ್ತಾ. ಹೈಕಮಾಂಡ್ ನಿರ್ಧಾರ ಮಾಡುತ್ತೆ. ನಾವು ಮಾಡೋದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಾತಿ ಗಣತಿ ಬಿಡುಗಡೆ ಪ್ರಸ್ತಾಪ ಇಟ್ಟ ಮೇಲೆ ಬಿಜೆಪಿಯವರು ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಯಾವಾಗಲೂ ಖಾಲಿ ಡಬ್ಬವೇ ಹೆಚ್ಚು ಶಬ್ಧ ಮಾಡೋದು. ಬಿಜೆಪಿ ಹಾಗೂ ಕುಮಾರಸ್ವಾಮಿ ಹತಾಶರಾಗಿ ಬಿಟ್ಟು ಬಾಯಿಗೆ ಬಂದ ಹಾಗೆ
ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.