SUDDIKSHANA KANNADA NEWS/ DAVANAGERE/ DATE:29-11-2024
ದಾವಣಗೆರೆ: ಚನ್ನಗಿರಿ ತಾಲೂಕಿನ ದೊಂದರಘಟ್ಟದಲ್ಲಿ ಮಚ್ಚಿನಿಂದ ಹಲ್ಲೆ ನಡೆಸಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.
ಚನ್ನಗಿರಿ ತಾಲೂಕಿನ ಕೆಂಪಯ್ಯನತೊಕ್ಕಲು ಗ್ರಾಮದ ಹನುಮಂತಪ್ಪ (45) ಕೊಲೆಯಾದ ವ್ಯಕ್ತಿ. ಈತನ ಬಾಮೈದುನ ಅಜ್ಜಿಹಳ್ಳಿ ಗ್ರಾಮದ ರಂಗನಾಥ್ (35) ಹತ್ಯೆ ಮಾಡಿದ ಆರೋಪಿ.
ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಇರುವ ದೊಂದರಘಟ್ಟ ಗ್ರಾಮದ ಬಳಿಯ ಪದ್ಮದೀಪ ಶಾಲೆಯ ಸಮೀಪ ಈ ಘಟನೆ ನಡೆದಿದೆ. ಅಜ್ಜಿಹಳ್ಳಿ ಗ್ರಾಮದ ಆಶಾ ಎಂಬಾಕೆ ಜೊತೆ ಹನುಮಂತಪ್ಪ ಕಳೆದ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ. ಇಬ್ಬರು ಪುತ್ರರೂ ಇದ್ದರು. ಆದ್ರೆ, ಇಬ್ಬರು ಮಕ್ಕಳು ಜನಿಸಿದ ಬಳಿಕ ಆಶಾ ಬಿಟ್ಟು ಶೋಭಾ ಎಂಬಾಕೆ ಜೊತೆ ಹನುಮಂತಪ್ಪ ಎರಡನೇ ಮದುವೆಯಾಗಿದ್ದ.
ಗುರುವಾರ ಬೆಳಿಗ್ಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಹನುಮಂತಪ್ಪ ಹಾಗೂ ರಂಗನಾಥ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಇದು ವಿಕೋಪಕ್ಕೆ ತಿರುಗಿದೆ. ಸಿಟ್ಟಿಗೆದ್ದ ರಂಗನಾಥ್ ತನ್ನ ಬಳಿಯಿದ್ದ ಮಚ್ಚಿನಿಂದ ಹನುಮಂತಪ್ಪನ ತಲೆಗೆ ಹೊಡೆದಿದ್ದಾನೆ. ಇದರಿಂದ ತೀವ್ರವಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಹನುಮಂತಪ್ಪ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.