SUDDIKSHANA KANNADA NEWS/ DAVANAGERE/ DATE:24-11-2024
ದಾವಣಗೆರೆ: ಸಂಜ್ಞೆಯ ಮೂಲಕ ತನ್ನ ಸಮಸ್ಯೆ ತೊಡಿಕೊಂಡ ಮಹಿಳೆಗೆ ಆಕೆಯ ಸಂಭಾಷಣೆಯ ರೀತಿಯೇ ಸಂಜ್ಞೆಯಲ್ಲೇ ಸ್ಪಂದಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಮಾನವೀಯತೆಗೆ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದರು.
ತಮ್ಮ ಗೃಹ ಕಚೇರಿಯಲ್ಲಿ ಸಾರ್ವಜನಿಕರನ್ನು ಸಂಸದರು ಭೇಟಿ ಮಾಡಿದರು.ಈ ವೇಳೆ ವಿವಿಧ ಕ್ಷೇತ್ರದಿಂದ ಆಗಮಿಸಿದ್ದ ಜನರು ತಮ್ಮ ಸಮಸ್ಯೆಗಳನ್ನು ಸಂಸದರ ಮುಂದಿಟ್ಟರು ಅಲ್ಲದೇ ಶೀಘ್ರವಾಗಿ ಪರಿಹರಿಸುವಂತೆ ಮನವಿ ಮಾಡಿದರು.
ಇದೇ ವೇಳೆ ಸಾರ್ವಜನಿಕರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಮಾತು ಬಾರದ ಮಹಿಳೆಯೊಂದಿಗೆ ಅವರ ಭಾಷೆಯಲ್ಲಿಯೇ ಸಂಸದರು ಮಾತುಕತೆ ನಡೆಸಿ ಸಮಸ್ಯೆಗೆ ಸ್ಪಂದಿಸಿದರು.ಸಂಸದರ ಮಾನವೀಯತೆಗೆ ನಡರೆದಿದ್ದ ನಾಗರೀಕರು ಶ್ಲಾಘನೆ ವ್ಯಕ್ತಪಡಿಸಿದರು.