ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮೊನಾಲಿಸಾ… ಮೊನಾಲಿಸಾ… ಬಾಲಿವುಡ್ ಗೆ ಕಾಲಿಟ್ಟ ವೈರಲ್ ಬೆಡಗಿ: ಸಿನಿಮಾ ನಟನೆ ಬಗ್ಗೆ ಹೇಳಿದ್ದೇನು..?

On: February 2, 2025 10:16 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:02-02-2025

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭ ಮೇಳದ ವೈರಲ್ ಹುಡುಗಿ ಮೊನಾಲಿಸಾ ಬಾಲಿವುಡ್‌ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ತನ್ನ ಕಣ್ಣುಗಳಿಂದಲೇ ಭಾರತೀಯ ಯುವಕರ ನಿದ್ದೆಕೆಡಿಸಿದ ಮೊನಾಲಿಸಾ ಈಗ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ನಾನು ಬಾಲಿವುಡ್ ನಟಿಸುತ್ತೇನೆ ಎಂದು ಕನಸು ಕಂಡಿರಲಿಲ್ಲ. ಆದ್ರೆ, ಈಗ ಅವಕಾಶ ಸಿಕ್ಕಿದ್ದು, ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿರುವ ಮಧ್ಯಪ್ರದೇಶದ 16 ವರ್ಷದ ಮೊನಾಲಿಸಾ ಭೋಸ್ಲೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೊದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ಮಹಾಕುಂಭ 2025 ರ ಸಮಯದಲ್ಲಿ ಇಂಟರ್ನೆಟ್ ಸೆನ್ಸೇಷನ್ ಆದ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ 16 ವರ್ಷದ ಹುಡುಗಿ ಮೊನಾಲಿಸಾ ಭೋಸ್ಲೆ ಈಗ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧವಾಗಿದ್ದು, ಎಕ್ಸೈಟ್
ಆಗಿದ್ದಾರೆ.

ಎಕ್ಸ್ ಟು ಟೇಕಿಂಗ್, ಅವರು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. “ಮಾಲೆ ಮಾರುವ ಸರಳ ಹುಡುಗಿಗೆ ಇಷ್ಟು ಪ್ರೀತಿ ಮತ್ತು ಗೌರವವನ್ನು ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು, ಇಂದು ನನ್ನ ಮೊದಲ ಚಿತ್ರ ಸಿಕ್ಕಿದ್ದು ನಿಮ್ಮೆಲ್ಲರಿಂದ,
ಇದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಯಾಗರಾಜ್‌ನಲ್ಲಿ 2025 ರ ಮಹಾಕುಂಭದಲ್ಲಿ ಕಂಟೆಂಟ್ ಕ್ರಿಯೇಟರ್ ಅವರು ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಿರುವುದನ್ನು ಚಿತ್ರೀಕರಿಸಿದ ನಂತರ ಮೊನಾಲಿಸಾ ಖ್ಯಾತಿಗೆ ಏರಿದರು. ಆಕೆಯ ಆಕರ್ಷಣೀಯ ಅಂಬರ್ ಕಣ್ಣುಗಳು
ಮತ್ತು ಪ್ರಕಾಶಮಾನವಾದ ಸ್ಮೈಲ್ ಅವಳಿಗೆ “ಮೋನಾ ಲಿಸಾ” ಎಂಬ ನಿಕ್ ನೇಮ್ ಬಂತು. ರಾತ್ರಿ ಕಳೆಯುವುದರೊಳಗೆ ವಿಡಿಯೋ ವೈರಲ್ ಆಗಿ ಖ್ಯಾತಿ ಗಳಿಸಿದ ಮೊನಾಲಿಸಾಳಿಗೆ ಆರಂಭದಲ್ಲಿ ಕಷ್ಟ  ಅನುಭವಿಸಬೇಕಾಯಿತು. ಆದ್ರೆ, ಈಗ ಸೆಲಬ್ರಿಟಿಯಷ್ಟು ಕ್ರೇಜ್ ಬಂದಿದೆ. ಪ್ರಯಾಗ್‌ರಾಜ್‌ನಲ್ಲಿ ತುಂಬಾ ನೊಂದುಕೊಳ್ಳುತ್ತಿದ್ದ ಆಕೆಗೆ ಹಾರ, ರುದ್ರಾಕ್ಷಿ ಮಾರಾಟ ಮಾಡಲು ಆಗುತ್ತಿರಲಿಲ್ಲ. ಯಾಕೆಂದರೆ ಫೋಟೋಗೆ ಫೋಸ್ ಕೊಡಿ, ಬೈಟ್ ಕೊಡಿ, ಸೆಲ್ಫಿ ನೀಡಿ ಎಂದು ದುಂಬಾಲು ಬೀಳುತ್ತಿದ್ದರು.

ಮೊನಾಲಿಸಾ ಬೋನ್ಸ್ಲೆ “ಡೈರಿ ಆಫ್ ಮಣಿಪುರ” ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಘೋಷಿಸಿದ ಚಲನಚಿತ್ರ ನಿರ್ಮಾಪಕ ಸನೋಜ್ ಮಿಶ್ರಾ ಅವರು ಈ ಹಿಂದೆ “ಘಜ್ನವಿ”, “ಶ್ರೀನಗರ”, “ಶಶಾಂಕ್” ಮತ್ತು “ಡೈರಿ ಆಫ್ ವೆಸ್ಟ್ ಬೆಂಗಾಲ್” ನಂತಹ
ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಭೋಂಸ್ಲೆ ಒಬ್ಬ ಮಹಿಳಾ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾನು ಮೊನಾಲಿಸಾ ಮತ್ತು ಅವರ ಕುಟುಂಬವನ್ನು ಅವರ ಮನೆಯಲ್ಲಿ ಭೇಟಿಯಾದೆ. ಅವರು ನನ್ನ ಚಿತ್ರದಲ್ಲಿ ಮೊನಾಲಿಸಾ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ಭೋಂಸ್ಲೆ ತನ್ನ ಜೀವನದಲ್ಲಿ ಎಂದಿಗೂ ನಟಿಸದಿದ್ದರೂ, ನಾನು ಅದನ್ನು ಸವಾಲಾಗಿ ತೆಗೆದುಕೊಂಡಿದ್ದೇನೆ ಎಂದು ಮಿಶ್ರಾ ಹೇಳಿದ್ದಾರೆ. ಮೊನಾಲಿಸಾಗೆ ನಟನೆಯ ತರಬೇತಿ ನೀಡುತ್ತೇವೆ, ಇದಾದ ಬಳಿಕ ಏಪ್ರಿಲ್‌ನಲ್ಲಿ ಆಕೆಯೊಂದಿಗೆ ಸಿನಿಮಾ ದೃಶ್ಯಗಳನ್ನು ಚಿತ್ರೀಕರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಹಿಂದೆ, ನೀವು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತೀರಾ ಎಂದು ಕೇಳಿದಾಗ, “ನನ್ನ ಪೋಷಕರು ನನಗೆ ಅವಕಾಶ ನೀಡಿದರೆ ನಾನು ಖಂಡಿತವಾಗಿಯೂ ಮಾಡುತ್ತೇನೆ” ಎಂದು ಅವರು ಹೇಳಿದ್ದರು.

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಅಂತರಾಷ್ಟ್ರ

ನ. 26ರಿಂದ ಐದು ದಿನಗಳ ಶಾಮನೂರು ಡೈಮಂಡ್, ಶಿವಗಂಗಾ ಕಪ್ 2025: ಅಂತರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜನೆ

ಭದ್ರತೆ

ಭದ್ರತೆ ಸವಾಲು ನಿಭಾಯಿಸದ, ದೇಶದ ಭದ್ರತಾ ವ್ಯವಸ್ಥೆ ವೈಫಲ್ಯ ಹೊಣೆ ಹೊತ್ತು ಅಮಿತ್ ಶಾ ರಾಜೀನಾಮೆ ನೀಡಲಿ: ಬಿ. ಕೆ. ಹರಿಪ್ರಸಾದ್ ಆಗ್ರಹ

ಧರ್ಮೇಂದ್ರ

ಧರ್ಮೇಂದ್ರ ಚಿಕಿತ್ಸೆಗೆ ಸ್ಪಂದಿಸುತ್ತಾ ಚೇತರಿಕೆ: ಸುಳ್ಳು ಸುದ್ದಿ ಹರಡುವವರ ವಿರುದ್ಧ ಹೇಮಾ ಮಾಲಿನಿ, ಇಶಾ ಡಿಯೋಲ್ ಕೆಂಡಾಮಂಡಲ!

ರೂಪದರ್ಶಿ

ಶವವಾಗಿ ಪತ್ತೆಯಾದ ರೂಪದರ್ಶಿ “ಖುಷಿ” ದೇಹದ ಮೇಲೆ ಗಾಯಗಳು: ಬಂಧಿತ ಗೆಳೆಯ ಖಾಸಿನ್ ಅಹ್ಮದ್ ಸುತ್ತ ಅನುಮಾನದ ಹುತ್ತ!

ದಾವಣಗೆರೆ

ಕೆಂಪು ಕೋಟೆ ಪ್ರಬಲ ಸ್ಫೋಟ ಹಿನ್ನೆಲೆ: ದಾವಣಗೆರೆ ಜಿಲ್ಲೆಯಲ್ಲಿ ಹೇಗಿದೆ ಕಟ್ಟೆಚ್ಚರ?

ನರೇಂದ್ರ ಮೋದಿ

ಕೆಂಪು ಕೋಟೆ ಸ್ಫೋಟದ ಹಿಂದಿನ ಪಿತೂರಿಗಾರರ ಬಿಡಲ್ಲ: ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ!

Leave a Comment