SUDDIKSHANA KANNADA NEWS/ DAVANAGERE/ DATE:09-02-2025
ದಾವಣಗೆರೆ: ಬೇ..ರ್ಸಿ ನನ್ಮ..ಕ್ಕಳು ನನ್ನ ಬಗ್ಗೆ ಮಾತಾಡ್ತಾರೆ. ಹಂದಿಗಳು ಮಾತನಾಡಿದ್ದಕ್ಕೆಲ್ಲಾ ಉತ್ತರ ಕೊಡಲ್ಲ. ದಾವಣಗೆರೆಯಲ್ಲಿರುವ ಎರಡು ಹಂದಿಗಳನ್ನು ಯಾಕೆ ತೋರಿಸುತ್ತೀರಾ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹಾಗೂ ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೇ ಹುಲಿ, ನಾನೇ ಹಿಂದೂ ನಾಯಕ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಮಾಧ್ಯಮದವರು ಹೇಳಲ್ಲ. ಜನರು ಹೇಳುತ್ತಾರೆ, ಅದಕ್ಕೆ ನೀವು ತೋರಿಸುತ್ತೀರಾ. ನಿಮ್ಮ ಪ್ರೀತಿ ವಿಜಯೇಂದ್ರ ಹಾಗೂ ಯಡಿಯೂರಪ್ಪರ ಮೇಲೆ ಇದೆ. ದಾವಣಗೆರೆಯಲ್ಲಿ ಎರಡು ಹಂದಿಗಳಿವೆ. ಬೆಂಗಳೂರಿನಲ್ಲಿರುವ ವಿಜಯೇಂದ್ರ ಮನೆ ಮುಂದೆ ಟೆಂಟ್ ಹೊಡೆಸಿ ಅಲ್ಲೇ ಕಾದುಕೊಂಡು ಇರಲಿ ಹೇಳಿ ಎಂದು ಗುಡುಗಿದರು.
ನಿತ್ಯವೂ ವಿಜಯೇಂದ್ರನ ಜಪ ಮಾಡಿಕೊಂಡೇ ಇರಲಿ. ಜಯ ಜಯ ವಿಜಯೇಂದ್ರ ನಿನ್ನ ನಾಮವು ನಮಗೆ ಅನುಕೂಲ ಎಂದು ಹೇಳಿಕೊಳ್ಳಲಿ. ತಿರುಗಾಡಿಕೊಂಡು ಇರಲಿ. ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.
ನೀವೇ ಸರ್ವೇ ಮಾಡುತ್ತೀರಲ್ವಾ. ಚುನಾವಣೆ ಬಂದಾಗ ಕರ್ನಾಟಕದಲ್ಲಿ ಬಿಜೆಪಿಗೆ 104 ಸ್ಛಾನ ಬರುತ್ತೆ ಎಂದು. ವಿಜಯೇಂದ್ರ ಕಡೆಗೆ ಸರ್ವೇ ಮಾಡುತ್ತೀರಾ ಮಾಡಿ. ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ ಹುದ್ದೆ ರೇಸ್ ನಲ್ಲಿ ನಾನೂ ಇದ್ದೇನೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರು ಯಾರು? ದಾವಣಗೆರೆ, ಬೀದರ್ ನಲ್ಲಿ ಸೋಲಿಸಿದವರು ಯಾರು? ನಮಗೂ ಗೊತ್ತು. ತುಮಕೂರಿನಲ್ಲಿ ಸೋಮಣ್ಣ ಸೋಲಿಸಲು ಏನೆಲ್ಲಾ ಮಾಡಿದ್ದರು ಎಂಬುದು ಗೊತ್ತು ಎಂದು ಕಿಡಿಕಾರಿದರು.







