SUDDIKSHANA KANNADA NEWS/ DAVANAGERE/ DATE:02-02-2025
ದಾವಣಗೆರೆ: ತಾಲೂಕಿನ ಕುರ್ಕಿ ಗ್ರಾಮದಲ್ಲಿ ಭದ್ರಾ ನಾಲೆಗೆ ಈಜಲು ತೆರಳಿ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಬಾಲಕನ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನ ಮೃತದೇಹಕ್ಕೆ ಹುಡುಕಾಟ ಮುಂದುವರಿದಿದೆ. ಮಾಯಕೊಂಡ ಶಾಸಕ ಕೆ. ಎಸ್. ಬಸವಂತಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಾಲಕರು ನಾಲೆಗೆ ಬಿದ್ದು ಸಾವನ್ನಪ್ಪಿದ ಸುದ್ದಿ ತಿಳಿದ ಕೂಡಲೇ ಘಟನೆ ಸ್ಥಳಕ್ಕೆ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ನೀರು ಪಾಲಾದ ಬಾಲಕರ ಮೃತದೇಹ ಹೊರ ತೆಗೆಯಲು ಸಹಕರಿಸಿದ್ದಾರೆ. ನುರಿತ ಈಜುಗಾರರನ್ನು ಕರೆಸಿದ್ದು, ಪಾಂಡು ಮೃತದೇಹ ಸಿಕ್ಕಿದೆ. ಯತೀಂದ್ರನ ಮೃತದೇಹ ಪತ್ತೆಯಾಗಿಲ್ಲ. ಹದಡಿ ಪೊಲೀಸರು ಮೃತದೇಹ ಹುಡುಕಾಟ ನಡೆಸಿದ್ದಾರೆ.
ಕಾಲುವೆ ಬಳಿ ಜನಸಾಗರ:
ಇಬ್ಬರು ಬಾಲಕರು ನೀರು ಪಾಲಾದ ಸುದ್ದಿ ಹಬ್ವುತ್ತಿದ್ದಂತೆ ಕುರ್ಕಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಬೈಕ್, ಕಾರು, ಟ್ರ್ಯಾಕ್ಟರ್ ಗಳಲ್ಲಿ ದೌಡಾಯಿಸಿದ್ದು, ಕಾಲುವೆ ಬಳಿ ಜನಸಾಗರ ಸೇರಿದೆ.
ಮುಗಿಲು ಮುಟ್ಟಿದ ಪೋಷಕರ ಆಕ್ರಂದನ:
ನೀರು ಪಾಲಾದ ಪೋಷಕರ ಅಕ್ರಂದನ ಮುಗಿಲು ಮುಟ್ಟಿದ್ದು, ಕೈಗೆ ಬಂದ ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಗಳ ರೋದನಕ್ಕೆ ಸೇರಿದ್ದ ಜನರು ಕೂಡ ಕಂಬನಿ ಮಿಡಿದರು. ಮಕ್ಕಳ ಪೋಷಕರಿಗೆ ಇದೇ ಸಂದರ್ಭದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಸಾಂತ್ವನ ಹೇಳಿದರು.