SUDDIKSHANA KANNADA NEWS/ DAVANAGERE/ DATE:21-12-2024
ಬೆಳಗಾವಿ: ವಿಕಾಸಸೌಧದಲ್ಲಿ ನಡೆದ ಬೆಳವಣಿಗೆಯಿಂದ ನೊಂದಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೌನಕ್ಕೆ ಶರಣಾಗಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿ. ಟಿ. ರವಿ ಆಡಿದ್ದ ಆಕ್ಷೇಪಾರ್ಹ ಮಾತಿಗೆ ಸಿಡಿದೆದಿದ್ದರು. ಮಹಿಳೆಗೆ ಈ ರೀತಿಯ ಗೌರವ ನೀಡುತ್ತಾರೆಂದರೆ ಬಿಜೆಪಿಯವರ ಸಂಸ್ಕೃತಿ ತೋರಿಸುತ್ತದೆ. ಸಿ. ಟಿ. ರವಿ ಆಡಿದ ಮಾತಿಗೆ ನೋವಾಗಿದೆ. ನನ್ನ ಮನಸ್ಸಿಗೆ ಘಾಸಿಯಾಗಿದೆ ಎಂದು ಕಣ್ಣೀರು ಹಾಕಿದ್ದರು.
ಬೆಳಗಾವಿಯಲ್ಲಿ ಸಾರ್ವಜನಿಕರ ಭೇಟಿ ರದ್ದುಮಾಡಿದ್ದಾರೆ. ಗೃಹ ಕಚೇರಿ ಹಾಗೂ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳಿಂದ ಗಿಜಿಗುಡುತಿತ್ತು. ಆದ್ರೆ. ಮನೆಯಲ್ಲಿಯೇ ಮೌನಕ್ಕೆ ಶರಣಾಗಿದ್ದಾರೆ. ನಿತ್ಯವೂ ಜನರಿಂದ ಇರುತಿತ್ತು. ಈಗ ಕಚೇರಿ ಮತ್ತು ಮನೆ ಬಿಕೋ ಎನ್ನುತ್ತಿದೆ. ಅಭಿಮಾನಿಗಳು ಸಿ. ಟಿ. ರವಿ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಪಾಲ್ಗೊಳ್ಳುವ ಸಾಧ್ಯತೆ ಇದೆ.