SUDDIKSHANA KANNADA NEWS/ DAVANAGERE/ DATE:08-02-2025
ದಾವಣಗೆರೆ: ಭಾರೀ ಕುತೂಹಲ ಮೂಡಿಸಿದ್ದ ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ದಾವಣಗೆರೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಅತ್ಯಂತ ಕ್ರಿಯಾಶೀಲಾ ಯುವ ಮುಖಂಡ ಮಹಬೂಬ್ ಬಾಷಾ ಭರ್ಜರಿ ಜಯ ಗಳಿಸಿದ್ದಾರೆ.
ಇತ್ತೀಚಿಗೆ ಸುಮಾರು ಒಂದು ತಿಂಗಳ ಕಾಲ ನಡೆದ ನಡೆದ ಯುವ ಕಾಂಗ್ರೆಸ್ ಚುನಾವಣೆ ಭಾರೀ ಕುತೂಹಲ ಮೂಡಿಸಿತ್ತು. ಸುಮಾರು ಅಭ್ಯರ್ಥಿಗಳಿಗೆ ಪ್ರತಿಷ್ಠೆಯ ಕಾಣವಾಗಿತ್ತು. ಯುವಕರಿಗೆ ಅತ್ಯಂತ ಸವಾಲಿನ ಚುನಾವಣೆಯಾಗಿತ್ತು. ಆದರೂ ಕಳೆದ ಬಾರಿ ದಕ್ಷಿಣ ವಲಯದ ಚುನಾವಣೆಯಲ್ಲಿ ಗೆದ್ದ ಅನುಭವವಿದ್ದ ಮಹಬೂಬ್ ಬಾಷಾ ಈ ಬಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಭರ್ಜರಿ ಜಯಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಮಹಬೂಬ್ ಬಾಷಾ ಅವರಿಗೆ ಮೇಯರ್ ಕೆ. ಚಮನ್ ಸಾಬ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಪಾಲಿಕೆ ಸದಸ್ಯರು ಸೇರಿದಂತೆ ಅನೇಕ ಮುಖಂಡರುಗಳು ಅಭಿನಂದಿಸಿದ್ದಾರೆ.