ಬಡಗುತಿಟ್ಟಿನ ಬಣ್ಣದ ವೇಷ ಹಾಗೂ ಮುಂಡಾಸು ವೇಷಕ್ಕೆ ಖ್ಯಾತಿ ಹೊಂದಿದ ಪೇತ್ರಿ ಮಾಧವ ನಾಯ್ಕ (84 ವರ್ಷ) ಪೇತ್ರಿಯ ಸ್ವಗೃದಲ್ಲಿ ಜೂನ್ 4ರಂದು
ನಿಧನರಾದರು.
ಇವರು ಪತ್ನಿ, ಓರ್ವ ಪುತ್ರಿ, ಐವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಡಾ. ಶಿವರಾಮ ಕಾರಂತರ ನೇತೃತ್ವದ ಯಕ್ಷರಂಗದಲ್ಲಿ 30 ವರ್ಷಗಳ ಕಾಲ ವೇಷಧಾರಿಯಾಗಿ ಕಲಾ ಪ್ರತಿಭೆಯನ್ನು ಮೆರೆದಿದ್ದರು. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.