SUDDIKSHANA KANNADA NEWS/ DAVANAGERE/ DATE:23-10-2024
ದಾವಣಗೆರೆ: ಸೌಹಾರ್ದ ಪ್ರಕಾಶನವು ಕಾಕನೂರಿನ ಮಲ್ಲಪ್ಳರ ಶ್ರೀಮತಿ ಚಂದ್ರಮ್ಮ, ಬಸವಂತಪ್ಪ ಹಾಗೂ ಇವರ ಮಗ ಎಂ. ಬಿ. ಶಂಕರಮೂರ್ತಿ ಪುಣ್ಯ ಸ್ಮರಣಾರ್ಥ ಪ್ರತಿವರ್ಷದಂತೆ 2024-25 ನೇ ಸಾಲಿಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದಾವಣಗೆರೆ ಜಿಲ್ಲಾ ಮಟ್ಟದಲ್ಲಿ ಮಾನವೀಯತೆಯ ಮೌಲ್ಯವನ್ನು ಆಧರಿಸಿ ಕಥೆ ಬರೆಯುವ ಸ್ಪರ್ಧೆಯನ್ನು ದೇಶಾಭಿಮಾನದ ಮೌಲ್ಯವನ್ನು ಆಧರಿಸಿ ರಾಷ್ಟ್ರೀಯ ಭಾವೈಕ್ಯತೆ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ಪರಿಸರ ಕಾಳಜಿಯ ಮೌಲ್ಯ ಆಧರಿಸಿ ಕಿರುನಾಟಕ ಬರಹ ಸ್ಪರ್ಧೆ ಏರ್ಪಡಿಸಿದೆ.
ಪ್ರಕೃತಿ ಸೌಂದರ್ಯ ಮತ್ತು ಮಾನವತೆ ಆಧರಿಸಿ ಕವನ ಸ್ಪರ್ಧೆಯನ್ನು ಏರ್ಪಡಿಸಿದೆ. ದಾವಣಗೆರೆ ಜಿಲ್ಲೆಯ ಆಸಕ್ತ ಎಲ್ಲ ಪ್ರೌಢಶಾಲಾ ವಿದ್ಯಾರ್ಥಿಗಳೂ ಈ ನಾಲ್ಕೂ ಸ್ಪರ್ಧೆಗಳಲ್ಲಿ ಅಥವಾ ಯಾವುದಾದರು ಒಂದು ಸ್ಪರ್ಧೆಯಲ್ಲಿ ಕೂಡ ಭಾಗವಹಿಸಬಹುದು.ಸ್ಪರ್ಧೆಯ ನಿಯಮಗಳು.
– ಸರ್ಕಾರಿ ಅನುದಾನಿತ ಅನುದಾನ ರಹಿತ ಯಾವುದೇ ಪ್ರೌಢಶಾಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು.
– ಕಥೆಯಾಗಲಿ ಪ್ರಬಂಧವಾಗಲಿ ಕಿರುನಾಟಕವಾಗಲಿ ಎ4 ಶೀಟಿನ ಮೂರು ಪುಟಗಳ ಮಿತಿಯಲ್ಲಿರಬೇಕು. ಕವಿತೆ ಹದಿನೈದು ಸಾಲುಗಳ ಮಿತಿಯಲ್ಲಿರಬೇಕು. ನಾಲ್ಕು ಕಡೆ ಮಾರ್ಝಿನ್ ಬಿಟ್ಟು ಸ್ವ ಹಸ್ತಾಕ್ಷರದಲ್ಲಿ ಮಾತ್ರವೇ ಬರೆದಿರಬೇಕು ಡಿಟಿಪಿ ಅಂತಹ ಯಾವುದೇ ಟೈಪಿಂಗ್ ಬರಹ ಪರಿಗಣನೆ ಮಾಡುವುದಿಲ್ಲ.
– ಕಥೆಯಾಗಲಿ ಪ್ರಬಂಧವಾಗಲಿ ಸ್ವಂತ ರಚನೆಯಾಗಿರಬೇಕು. ಬೇರೊಬ್ಬರ ಯಾವುದೇ ಕೃತಿ ಚೌರ್ಯ ಆಗಿರಬಾರದು.
– ಪ್ರತಿ ವಿದ್ಯಾರ್ಥಿಯೂ ಎಲ್ಲ ಸ್ಪರ್ಧೆಗಳಲ್ಲೂ ಭಾಗವಹಿಸಬಹುದು.
– ಭಾಗವಹಿಸುವ ಪ್ರತಿ ವಿದ್ಯಾರ್ಥಿಯೂ ತಾನು ಓದುತ್ತಿರುವ ಶಾಲಾ ಮುಖ್ಯಸ್ಥರಿಂದ ವ್ಯಾಸಂಗ ದೃಢೀಕರಣ ಪತ್ರ ದೊಂದಿಗೆ, ತನ್ನ ಹೆಸರು ,ತರಗತಿ , ವಿಳಾಸ ,ವಾಟ್ಸ್ಯಪ್ ಹೊಂದಿದ ಮೊಬೈಲ್ ನಂಬರ್ ಬರೆದು ಹಾಗೂ ತನ್ನ ಭಾವಚಿತ್ರವನ್ನು ಸ್ಪರ್ಧಾ ಬರಹದ ಪೇಜ್ ಮೇಲೆ ಲಗತ್ತಿಸಿ ಕಳುಹಿಸುವುದು.
– ಸ್ಪರ್ಧಾ ಬರಹಗಳ ಅಂತಿಮ ತೀರ್ಪು ಸೌಹಾರ್ದ ಪ್ರಕಾಶನದ್ದೇ ಆಗಿರುತ್ತದೆ ಇಲ್ಲಿ ಯಾವುದೇ ತರ್ಕ ವಾದಗಳಿಗೆ ಅವಕಾಶ ಇಲ್ಲ. ಪಾರದರ್ಶಕ ಪ್ರಾಮಾಣಿಕ ತೀರ್ಪು ಮಾತ್ರ ಇರುತ್ತದೆ.
– ಪ್ರತಿ ಸ್ಪರ್ಧೆಗೆ ಮೂರು ಬಹುಮಾನಗಳು ಇರುತ್ತವೆ. ನಗದು ಹಣ ಹಾಗೂ ಪ್ರಶಸ್ತಿ ಪತ್ರಗಳನ್ನು ಹಿರಿಯ ಗಣ್ಯರಿಂದ ಪ್ರದಾನ ಮಾಡಿಸಲಾಗುತ್ತದೆ. ಕಾರ್ಯಕ್ರಮದ ದಿನವನ್ನು ಮುಂದೆ ತಿಳಿಸಲಾಗುತ್ತದೆ. ಕಾರ್ಯಕ್ರಮ ದಾವಣಗೆರೆಯಲ್ಲಿ ನಡೆಯುತ್ತದೆ.
– ಸ್ಪರ್ಧಾ ಬರಹಗಳನ್ನು 2024 ನವಂಬರ್ 30 ರೊಳಗೆ ಅಂಚೆ/ಕೊರಿಯರ್ ಮೂಲಕ ಮಾತ್ರವೇ ಕಳುಹಿಸುವುದು. ಪೋಸ್ಟ್ ಮಾಡಿದವರು ವಾಟ್ಸ್ಯಪ್ ನಲ್ಲಿ ಮೆಸೇಜ್ ಮತ್ತು ವಿಳಾಸ ತಪ್ಪದೇ ಹಂಚುವುದು
ಸ್ಪರ್ಧಾ ಬರಹ ಕಳುಹಿಸುವ ವಿಳಾಸ
ಶ್ರೀಮತಿ//ಎ.ಸಿ.ಶಶಿಕಲಾ ಶಂಕರಮೂರ್ತಿ
ಶಿಕ್ಷಕಿ ,ಸಾಹಿತಿ, ಪ್ರಕಾಶಕಿ.
#ಮನೆ ನಂಬರ್ 916 / ಸೈಟ್ ನಂಬರ್ 6
ವೇಣು ಸ್ಟೋರ್ ಎದುರಿನ ರಸ್ತೆ
ಶೆಟ್ಟಿಹಳ್ಳಿ ಮುಖ್ಯ ರಸ್ತೆ
ವಾರ್ಡ್ ನಂಬರ್ -12
ಬೃಂದಾವನ ಬಡಾವಣೆ
ಜಾಲಹಳ್ಳಿ ವೆಸ್ಟ್
ಬೆಂಗಳೂರು-560015
ಮೊಬೈಲ್ ನಂಬರ್ -8310947102
ಹೆಚ್ಚಿನ ಮಾಹಿತಿಗೆ ಸಂಜೆ 6 ಗಂಟೆ ಮೇಲೆ 8310947102 ನಂಬರ್ ಸಂಪರ್ಕ ಮಾಡಬಹುದು ಎಂದು ದಾವಣಗೆರೆ ಸೌಹಾರ್ದ ಪ್ರಕಾಶನದ ಪ್ರಕಾಶಕಿ ಶ್ರೀಮತಿ ಎ.ಸಿ.ಶಶಿಕಲಾ ಶಂಕರಮೂರ್ತಿ ತಿಳಿಸಿದ್ದಾರೆ.