SUDDIKSHANA KANNADA NEWS/ DAVANAGERE/ DATE:11-04-2025
ದಾವಣಗೆರೆ: ಜಾತಿ ಗಣತಿ ವರದಿ ಜಾರಿ ಮಾಡಲಿ, ಆಮೇಲೆ ನೋಡೋಣ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿ ಜಾರಿ ಸಂಬಂಧ ಸಚಿವ ಸಂಪುಟ ಸಭೆ ನಡೆದಿರುವ ಕುರಿತಂತೆ ನನಗೇನೂ ಗೊತ್ತಿಲ್ಲ. ಬೇರೆ ಕೆಲಸ ನಿಮಿತ್ತ ಹೋಗಿದ್ದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದರು.
ಡಿಸೆಂಬರ್ ತಿಂಗಳ ಹೊತ್ತಿಗೆ ಮುಖ್ಯಮಂತ್ರಿ ಸ್ಥಾನ ಖಾಲಿಯಾಗುತ್ತದೆ, ಬೇರೆಯವರು ಬರುತ್ತಾರೆ ಎಂಬ ಮಾಹಿತಿ ಇರುವ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಮನೂರು ಶಿವಶಂಕರಪ್ಪ ಅದೆಲ್ಲಾ ಸುಳ್ಳು ಎಂದಷ್ಟೇ ಪ್ರತಿಕ್ರಿಯೆ ನೀಡಿದರು.
ಜಾತಿ ಗಣತಿ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ. ಅವರೂ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ. ಮಾಡಲಿ, ಆಮೇಲೆ ನೋಡೋಣ. ಪದೇ ಪದೇ ಈ ಬಗ್ಗೆ ಮಾತನಾಡಲು ಹೋಗಲ್ಲ ಎಂದು ಅವರು ತಿಳಿಸಿದರು.