SUDDIKSHANA KANNADA NEWS/ DAVANAGERE/ DATE:20-10-2023
ದಾವಣಗೆರೆ (Davanagere): ಸಾರ್ವಜನಿಕ ವಿಜಯದಶಮಿ ಅಂಗವಾಗಿ ನಗರದ ರಾಂ ಅಂಡ್ ಕೋ ವೃತ್ತದಿಂದ ವಿಜಯದಶಮಿ ಪ್ರಯುಕ್ತ ವಿಶ್ವ ಹಿಂದೂ ಪರಿಷದ್ ಮತ್ತು ಸಾರ್ವಜನಿಕ ವಿಜಯದಶಮಿ ಸಮಿತಿ ವತಿಯಿಂದ ಬೃಹತ್ ಮಹಿಳಾ ಬೈಕ್ ರ್ಯಾಲಿ ನಡೆಸಲಾಯಿತು.
Read Also This Story:
Davanagere: ಹಾದಿಬೀದಿಯಲ್ಲಿ ರೇಣುಕಾಚಾರ್ಯ ಪಕ್ಷದ ವಿರುದ್ಧ ಮಾತನಾಡಬಾರದು: ಬಿಜೆಪಿಯಿಂದ ಉಚ್ಚಾಟಿಸುವಂತೆ ವರಿಷ್ಠರಿಗೆ ಒತ್ತಾಯ
ಬೈಕ್ ರ್ಯಾಲಿಯು ರಾಂ ಅಂಡ್ ಕೋ ವೃತ್ತದಿಂದ ಪ್ರಾರಂಭವಾಗಿ ಅರುಣಾ ಚಿತ್ರಮಂದಿರ ವೃತ್ತ, ವಿನೋಬ ನಗರದ ಎರಡನೇ ಮೇನ್, ರಿಂಗ್ ರಸ್ತೆಯ ಹೊಸ ಕ್ಲಾಕ್ ಟವರ್, ಲಕ್ಷ್ಮೀ ಫ್ಲೋರ್ ಮಿಲ್, ವಿದ್ಯಾನಗರ, ಹದಡಿ ರೋಡ್, ಹೆಚ್
ಕೆ ಆರ್ ಸರ್ಕಲ್, ಶಿವಪ್ಪ ಸರ್ಕಲ್, ತ್ರಿಶೂಲ್ ಚಿತ್ರಮಂದಿರದಿಂದ ಪಿಬಿ ರಸ್ತೆ ಮೂಲಕ ಸಾಗಿ ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣ ತಲುಪಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಮಾಜಿ ಸದಸ್ಯರಾದ ಜಯಮ್ಮ, ದೇಶದ ಮತ್ತು ಧರ್ಮದ ರಕ್ಷಣೆಗೆ ಮಹಿಳೆಯರು ಜೊತೆಗೂಡುತ್ತಾರೆ ಎಂಬ ಸಂದೇಶದೊಂದಿಗೆ ಬೈಕ್ರ್ಯಾಲಿ ಹಮ್ಮಿಕೊಂಡಿದ್ದೇವೆ. ಮಳೆ ಬೆಳೆ ಆಗಿ ರೈತರ
ಮೊಗದಲ್ಲಿ ಮಂದಹಾಸ ಮೂಡಲೆಂದು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿ ಬೈಕ್ ರ್ಯಾಲಿ ಪ್ರಾರಂಭಿಸಿದ್ದೇವೆ ಎಂದರು.
ಬೈಕ್ ರ್ಯಾಲಿಗೆ ಎ.ಎಸ್.ಐ ಮಾಳಮ್ಮ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚೇತನ ಶಿವಕುಮಾರ್, ಮಂಜುಳಾ ಮಹೇಶ್, ಲತಾ ನಾಗರಾಜ್, ಶೋಭಾ ಕೊಟ್ರೇಶ್, ಉಮಾ ರಮೇಶ್, ದಾಕ್ಷಾಯಿಷಿ ಅಂದನಪ್ಪ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ
ಲೋಕಿಕೆರೆ ನಾಗರಾಜ್, ದೂಡ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮತ್ತಿತರರು ಹಾಜರಿದ್ದರು.
ಮಡಿಕಟ್ಟೆಯಲ್ಲಿ ದಸರಾ ಹಬ್ಬದ ಪೂಜಾ ಮಹೋತ್ಸವ:
ಧೋಬಿಘಾಟ್ (ಮಡಿಕಟ್ಟೆ) ವೃತ್ತಿಪರ ಮಡಿವಾಳರ ಸಂಘ ದಾವಣಗೆರೆ, ದಾವಣಗೆರೆ ಜಿಲ್ಲೆಯ ಶ್ರೀ ಮಡಿವಾಳ ಮಾಚಿದೇವ ಸಂಘ, ದಾವಣಗೆರೆ ಜಿಲ್ಲಾ ಮಹಿಳಾ ಮಡಿವಾಳ ಮಾಚಿದೇವ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿನ ಜಿಲ್ಲಾ ಪಂಚಾಯತ ಎದುರಿನ ಮಡಿಕಟ್ಟೆಯಲ್ಲಿ ಅ.23ರ ಸೋಮವಾರ 14ನೇ ವರ್ಷದ ಶ್ರೀ ಬನ್ನಿ ಮಹಾಕಾಳಿದೇವಿಯ ದಸರಾ ಹಬ್ಬದ ಪೂಜಾ ಮಹೋತ್ಸವ ಆಯೋಜಿಸಲಾಗಿದೆ ಎಂದು ಮಡಿಕಟ್ಟೆ ಅಧ್ಯಕ್ಷ ಜಿ.ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಅಂದು ಬೆಳಗ್ಗೆ 6ಕ್ಕೆ ದೇವಿಗೆ ರುದ್ರ ಹೋಮ, ವಿಶೇಷ ಅಲಂಕಾರ, ಅಭಿಷೇಕ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಬೆಳಿಗ್ಗೆ 11.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಚಿತ್ರದುರ್ಗ ಮಡಿವಾಳ ಮಾಚಿದೇವ ಮಹಾ ಸಂಸ್ಥಾನ ಮಠದ ಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ, ಭೂ ವಿಜ್ಞಾನ ಮತ್ತು ಗಣಿಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್, ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಉಪಮೇಯರ್ ಯಶೋಧ, ಯಶವಂತ ರಾವ್ ಜಾಧವ್, ಡಾ.ಎ.ಹೆಚ್.ಶಿವಯೋಗಿ ಸ್ವಾಮಿ, ಬಿ.ವೀರಣ್ಣ, ದೇವರಮನಿ ಶಿವಕುಮಾರ್ ಆಗಮಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಬಿ.ಜಿ.ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಶ್ರೀನಿವಾಸ್ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ಪ್ರಸನ್ನ ಕುಮಾರ್, ಗೀತಾ ನಾಗರಾಜ್, ಎ.ನಾಗರಾಜ್, ಎಂ.ನಾಗೇAದ್ರಪ್ಪ, ಓಂಕಾರಪ್ಪ, ಅವರಗೆರೆ ಉಮೇಶ್, ನಾಗರಾಜ್, ನಾಗಮ್ಮ, ವಿರೂಪಾಕ್ಷಪ್ಪ ಮಂಜುನಾಥ, ಜಿ.ಹೆಚ್. ನಾಗರಾಜ್, ಹುಲಿಕಟ್ಟೆ ರಾಮಚಂದ್ರಪ್ಪ, ಅನ್ನಪೂರ್ಣಮ್ಮ ಬಸವರಾಜಪ್ಪ, ಎಂ.ವೈ. ಸತೀಶ್, ಪರಶುರಾಮ್, ಎಂ.ಎನ್.ವೇಣು, ಚಂದ್ರಪ್ಪ, ಮಂಜುನಾಥ ಡೈಮಂಡ್, ಜಿ.ವಿಜಯ್ ಕುಮಾರ್, ಆರ್.ಎನ್.ಧನಂಜಯ, ಎಂ.ನಾಗರಾಜ್, ಅಂಜಿನಪ್ಪ ಪೂಜಾರ್, ಎಂ.ರುದ್ರೇಶ್, ಸಿ.ಗುಡ್ಡಪ್ಪ, ಹೆಚ್.ದುಗ್ಗಪ್ಪ, ಅಜ್ಜಯ್ಯ, ಪಿ.ಮಂಜುನಾಥ್, ಸುರೇಶ್ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಡಿಕಟ್ಟೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಜಾಹೀರಾತು:
ವಧು – ವರ ಮಾಹಿತಿ ಕೇಂದ್ರ
ನಮ್ಮಲ್ಲಿ ಎಲ್ಲಾ ಜಾತಿಯವರು ಹಾಗೂ ಎಲ್ಲಾ ವರ್ಗವದರು ಇದ್ದಾರೆ. ಮೊದಲ ಹಾಗೂ ಎರಡನೇ ಮದುವೆಗೆ ಹಾಗೂ ನಮ್ಮಲ್ಲಿ 2 ಲಕ್ಷ ಪ್ರೊಫೈಲ್ ಇದೆ. ನಿಮ್ಮಲ್ಲಿ ಎಂಥ ಸಮಸ್ಯೆ ಇದ್ದರೂ ಕೇವಲ ಮೂರು ತಿಂಗಳಲ್ಲಿ ಮದುವೆ ಹೊಂದಿಸಿ ಕೊಡುತ್ತೇವೆ ಹಾಗೂ ಅಂತರಜಾತಿ ಮದುವೆ ಹೆಚ್ಚಾಗಿ ಮಾಡಿಸುತ್ತೇವೆ. ಒಮ್ಮೆ ಭೇಟಿ ಕೊಡಿ ಅಥವಾ ಕರೆ ಮಾಡಿ ಮೊಬೈಲ್ ನಂಬರ್: 99455 00051, ವಾಟ್ಸಪ್ ನಂಬರ್ 98443 50220.