SUDDIKSHANA KANNADA NEWS/ DAVANAGERE/ DATE:07-01-2025
ದಾವಣಗೆರೆ: ದಾವಣಗೆರೆಯಲ್ಲಿ ಕರ್ನಾಟಕ ರಾಜ್ಯ ವಿವಿದೋದ್ದೇಶ ಪೂರಕ ಶ್ರೀ ಕುರುಹಿನಶೆಟ್ಟಿ ಯುವಕ ಸಂಘದ ಸರ್ವಸದಸ್ಯರ ಸಭೆ ನಗರದ ರೋಟರಿ ಕ್ಲಬ್ ನಲ್ಲಿ ನಡೆಯಿತು. ಸಮಾಜದ ಕುಲದೇವರಾದ ಶ್ರೀ ನೀಲಕಂಠೇಶ್ವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಭೆಗೆ ಚಾಲನೆ ಕೊಡಲಾಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಇಂಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ಹಿರಿಯರು ಈ ಹಿಂದೆ ನಗರದ ಎಸ್ ಎಸ್ ಬಡಾವಣೆಯಲ್ಲಿ ಸರ್ಕಾರದಿಂದ ನಿವೇಶನ ಪಡೆದಿದ್ದರು. ಯುವಕರು ಸಮಾಜದೊಂದಿಗೆ ಕೈಜೋಡಿಸಿ ಒಗ್ಗಟ್ಟಾಗಿ ಕೆಲಸ ನಿರ್ವಹಿಸಿದರೆ ರಾಜ್ಯ ಸರ್ಕಾರದಿಂದ ಅನುದಾನ ಪಡೆದು ನಗರದಲ್ಲಿ ಒಂದು ಭವ್ಯವಾದ ಹಾಗೂ ಸುಂದರವಾದ ಸಮುದಾಯ ಭವನ ಕಟ್ಟಲು ಸಾಧ್ಯವಾಗುತ್ತದೆ. ಕೆಲವು ವರ್ಷಗಳಿಂದ ಸಂಘವು ನೊಂದಣಿಯಾಗಿರಲಿಲ್ಲ ಈಗ ಚಾಲ್ತಿ ಸ್ಥಿತಿ ತರುವಲ್ಲಿ ಸಮಾಜದ ಅಧ್ಯಕ್ಷ ರಮೇಶ ಜಂಬಣ್ಣ ಗಣಪಾ ಶ್ರಮ ಅಪಾರ ಎಂದರು.
ಸಮಾಜದ ಸಂಘಕ್ಕೆ ಮರುಜೀವ ತುಂಬಿದೆ. ಮುಂದಿನ ಕಾರ್ಯ ಚಟುವಟಿಕೆ ಹಾಗೂ ಸಮಾಜದ ಸಂಘಟನೆಗೆ ಒತ್ತು ಕೊಡುವ ಮೂಲಕ ಮುಂಬರುವ ದಿನಗಳಲ್ಲಿ ಒಂದು ಉತ್ತಮವಾದ ಸಮುದಾಯಭವನ ನಿರ್ಮಿಸಿ ಸಮಾಜಕ್ಕೆ ಕೊಡುಗೆ ಕೊಡುವ ಮೂಲಕ ಸಮಾಜದ ಯುವಕರ ಕನಸನ್ನು ನನಸು ಮಾಡುವ ದಿನಗಳು ಸನ್ನಿಹಿತ ವಾಗಿದೆ ಎಂದು ಹೇಳಿದರು.
ಕಳೆದ ವಾರ ಗಂಗಾವತಿಯ ನಮ್ಮ ಸಮಾಜದ ಹಿರಿಯರು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರನ್ನು ಭೇಟಿ ಮಾಡಿದಾಗ, ಸಮುದಾಯ ಭವನ ಕಟ್ಟಡ ನಿರ್ಮಾಣದ ಕುರಿತು ಚರ್ಚೆ ನಡೆಸಿದಾಗ ಅವರು ನಿಮ್ಮೊಂದಿಗೆ ಸದಾ ನಾನು ಇದ್ದೇನೆ. ಸರ್ಕಾರದಿಂದ ಸಮುದಾಯಭವನಕ್ಕೆ ಅನುದಾನ ಕೊಡಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂಬ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರಮೇಶ ಜಂಬಣ್ಣ ಗಣಪಾ ಅವರು ಮಾತನಾಡಿ ಸಮುದಾಯ ಭವನ ನಿರ್ಮಾಣ ಮಾಡುವ ಮುನ್ನ ನಿವೇಶನದಲ್ಲಿ ಒಂದು ಸುಂದರವಾದ ನಮ್ಮ ಕುಲ ದೇವರಾದ ಶ್ರೀ ನೀಲಕಂಠೇಶ್ವರ ಸ್ವಾಮಿಯ ದೇವಸ್ಥಾನವನ್ನು ನಿರ್ಮಿಸೋಣ. ದೇವರ ಕೃಪಾಶೀರ್ವಾದದಿಂದ ಮುಂದಿನ ನಮ್ಮ ಎಲ್ಲಾ ಕಾರ್ಯಗಳಿಗೆ ಶುಭ ಸೂಚಕವಾಗುವುದು, ಸಮಾಜದ ಏಳ್ಗೆಗಾಗಿ ಸಮಾಜದ ಬಂಧುಗಳಿಗಾಗಿ ನನ್ನ ಎಲ್ಲಾ ಶ್ರಮವನ್ನು ಮೀಸಲಿಡಲು ನಾನು ಸಿದ್ದನಾಗಿರುವೆ, ತಮ್ಮ ಸಹಕಾರ ನನಗೆ ಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಗಂಗಾವತಿ ತಿಮ್ಮಣ್ಣ, ಖಜಾಂಚಿಯಾದ ಬಸವರಾಜ್ ತಾಬಂಡಿ, ನಿರ್ದೇಶಕರಾದ ಹಾಲೇಶ್ ಕಟ್ಟಿಮನಿ, ಸಮಾಜದ ಮುಖ್ಯಸ್ಥರಾದ ರವಿ, ಗಿರಿಮಲ್ಲೇಶ್, ಮುಕ್ಕಣ್ಣ ಶ್ಯಾವಿ, ಕೇಶವಮೂರ್ತಿ ಕೆ ಸಿ, ಬೆನಕಲಪ್ಪ ಬುಗುಡೆ, ಬಸವರಾಜ್ ಖಾಲಿಚೀಲ ಉಪಸ್ಥಿತರಿದ್ದರು,
ಮುಖ್ಯ ಅಥಿತಿಯಾಗಿ ಹರಿಹರ ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಬಸವರಾಜ್ ಇಂಡಿ ಭಾಗವಹಿಸಿದ್ದರು. ಸಭೆಯಲ್ಲಿ ನಿರ್ದೇಶಕರಾದ ಕೃಷ್ಣಮೂರ್ತಿ ಕೂನ,ಅಶೋಕ್ ಶ್ಯಾವಿ, ವಸಂತ್ ಕುಮಾರ್ ಗೊಟೂರು,ಮಲ್ಲಿಕಾರ್ಜುನ ಕಾಮೂರ್ತಿ,ಪಕ್ಕೀರೇಶ್, ಕರಿಬಸಪ್ಪ ಐರಣಿ, ಗೋವಿಂದರಾಜ್ ಕನಿಕೆ, ನಾಗರಾಜ್ ಗೊಂಬಿ, ಬಸವರಾಜ್ ಗೊಂಬಿ, ಸಮಾಜದ ಮುಖಂಡರುಗಳು ಮಹಿಳಾ ಮುಖ್ಯಸ್ಥರು ಇನ್ನಿತರರು ಭಾಗವಹಿಸಿದ್ದರು. ಮಂಜುಳಾ ಸಿದ್ದಪ್ಪ ಪ್ರಾರ್ಥನೆ ಮಾಡಿದರೆ, ಮಲ್ಲಿಕಾಜುನ ಕಾಮೂರ್ತಿ ಸ್ವಾಗತ ಕೋರಿದರು. ಕೊನೆಯಲ್ಲಿ ಅಶೋಕ್ ಶ್ಯಾವಿ ವಂದಿಸಿದರು.