ಕಾಸರಗೋಡು : ಕ್ರೈಸ್ತ ಚರ್ಚಿನ ಧರ್ಮಗುರುವೊಬ್ಬರು ಕರೆಂಟ್ ಶಾಕ್ ಗೆ ಒಳಗಾಗಿ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಮುಳ್ಳೇರಿಯ ದಲ್ಲಿ ನಡೆದಿದೆ.
ಇಲ್ಲಿನ ಮುಳ್ಳೇರಿಯಾ ಇನ್ಫೆಂಟ್ ಜೀಸಸ್ ಚರ್ಚ್ ನ ಧರ್ಮಗುರು ಫಾ. ಮ್ಯಾಥ್ಯೂ ಶಿನ್ಸ್ ಕುಡಿಲಿಲ್ ( 30) ಮೃತಪಟ್ಟವರಾಗಿದ್ದಾರೆ. ಜೊತೆಗಿದ್ದ ಧರ್ಮಗುರು ಫಾ. ಸೆಬಿನ್ ಜೋಸೆಫ್ ( 29) ಗಾಯಗೊಂಡಿದ್ದಾರೆ. ಫಾ. ಮ್ಯಾಥ್ಯೂ ಶಿನ್ಸ್ ಕುಡಿಲಿಲ್ ಮೂಲತಃ ಕಣ್ಣೂರು ಇರಿಟ್ಟಿ ನಿವಾಸಿಯಾಗಿದ್ದಾರೆ. ದೇಲಂಪಾಡಿ ಸಂತ ಮೇರಿಸ್ ಚರ್ಚ್ ಧರ್ಮಗುರು ಆಗಿದ್ದ ಫಾ . ಮ್ಯಾಥ್ಯೂ , ಗುರುವಾರ ಸಂಜೆ ಮುಳ್ಳೇರಿಯಾ ಚರ್ಚ್ ನಲ್ಲಿ ರಾಷ್ಟ್ರ ಧ್ವಜ ಅವರೋಹಣ ನಡೆಸುತ್ತಿದ್ದಾಗ ಧ್ವಜ ಅಳವಡಿಸಿದ್ದ ಕಬ್ಬಿಣದ ಪೈಪ್ ಸಮೀಪದ ಹೈಟೆನ್ಷನ್ ಲೈನ್ ಗೆ ತಗಲಿದೆ. ವಿದ್ಯುತ್ ಶಾಕ್ ತಗಲಿ ನೆಲಕ್ಕೆ ಬಿದ್ದ ಇಬ್ಬರನ್ನೂ ಕೂಡಲೇ ಮುಳ್ಳೇರಿಯಾದ ಆಸ್ಪತ್ರೆಗೆ ತಲಪಿಸಿದರೂ ಫಾ. ಮ್ಯಾಥ್ಯೂ ಅದಾಗಲೇ ಮೃತಪಟ್ಟಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.